Mysore
14
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ದೇಶದಲ್ಲಿ ಕೋಮುವಾದ ಅಳಿಸಿ ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್‌ ಗೆಲ್ಲಬೇಕು: ಎಚ್‌.ಸಿ ಮಹದೇವಪ್ಪ

ಚಾಮರಾಜನಗರ: ಬಿಜೆಪಿ ವಾಮ ಮಾರ್ಗಗಳ ಮೂಲಕ ದೇಶದ 140 ಕೋಟಿ ಜನರ ರಕ್ಷಣೆ ಮಾಡಲು ಇರುವ ಸಂವಿಧಾನವನ್ನು ನಾಶಮಾಡಲು ಮುಂದಾಗಿದೆ. ಕೋಮುವಾದವನ್ನು ಅಳಿಸಲು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಬೇಕು. ಹೀಗಾಗಿ ಈ ಬಾರಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಆಯ್ಕೆ ಮಾಡಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ ಮಹದೇವಪ್ಪ ಮನವಿ ಮಾಡಿದರು.

ಚಾಮರಾಜನಗರ ಬ್ಲಾಕ್ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನರನ್ನು ಮೂಢನಂಬಿಕೆಗೆ ತಳ್ಳುವ ಪ್ರಧಾನಿ ನಮ್ಮನ್ನು ಆಳುತ್ತಿದ್ದು, ಇವರು ಇದನ್ನೇ ಸನಾತನವಾದ ಎಂದು ಹೇಳುತ್ತಾರೆ. ಬಿಜೆಪಿ ಅವಧಿಯಲ್ಲಿ ಹತ್ತು ವರ್ಷಗಳಿಂದ ದೇಶದ, ರೈತರ ಹಿತ ಕಾದಿಲ್ಲ. ರೈತರಿಗಾಗಿ ಇದ್ದ ಭೂ ಶಾಸಕ ಕಾಯ್ದೆಯನ್ನು ಸಹಾ ಬಿಜೆಪಿ ರದ್ದು ಮಾಡಿ ರೈತರ ಬದುಕನ್ನು ನಾಶ ಮಾಡಿದೆ ಎಂದು ಕಿಡಿಕಾರಿದರು.

ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ಆಹಾರ ಭದ್ರತೆ ಹಾಗೂ ಉದ್ಯೋಗ ಭದ್ರತೆ ಜಾರಿಗೊಳಿಸಿತು. ಆದರೆ ಬಿಜೆಪಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹಾಗೂ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿತ್ತು. ಯಾವುದನ್ನೂ ಮಾಡಲಿಲ್ಲ. ಆದರೆ ತಮ್ಮನ್ನು ಪ್ರಶ್ನೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸುತ್ತ ಬಿಜೆಪಿ ವಿರುದ್ಧ ಧ್ವನಿ ಎತ್ತುವವರ ಧ್ವನಿ ಅಡಗಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

 

Tags:
error: Content is protected !!