ಚಾಮರಾಜನಗರ: ಚಾಮರಾಜನಗರದ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ.
ವಿವಿಧ ಅಪರಾಧಗಳಲ್ಲಿ ನೂರಾರು ಮಂದಿ ಭಾಗಿಯಾಗಿ ಜೈಲು ಸೇರಿದ್ದರು. ಆಸಕ್ತಿಯುಳ್ಳಂತಹ ಯುವ ವಿಚಾರಣಾಧೀನ ಕೈದಿಗಳಿಗೆ ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡುತ್ತಿದ್ದಾರೆ.
ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಆಫ್ ಲೈನ್, ಆನ್ ಲೈನ್ ಕ್ಲಾಸಸ್ ಮಾಡಲಾಗುತ್ತಿದೆ. ಇನ್ನು ವಿಚಾರಣಾಧೀನ ಕೈದಿಗಳು ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಲಿದ್ದು, ಈ ನಿಟ್ಟಿನಲ್ಲಿ ಕಂಪ್ಯೂಟರ್ ತರಬೇತಿಯನ್ನು ಹೇಳಿಕೊಡಲಾಗುತ್ತಿದೆ.