Mysore
17
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಚಾಮರಾಜನಗರಕ್ಕೆ ಬಂದಾಗಲೆಲ್ಲಾ ಸಿಎಂ ಕುರ್ಚಿ ಗಟ್ಟಿಯಾಗಿದೆ: ಸಿದ್ದರಾಮಯ್ಯ

ಕೊಳ್ಳೇಗಾಲ: ಸಿಎಂ ಸಿದ್ದರಾಮಯ್ಯ ಇಂದು (ಡಿಸೆಂಬರ್‌ 7) ಚಾಮರಾಜನಗರ ಭೇಟಿ ನೀಡಿದ್ದು, ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಿದ ಅವರು ಚಾಮರಾಜನಗರ ಜಿಲ್ಲೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳದುಕೊಳ್ಳುತ್ತಾರೆ ಎಂಬ ಮಾತು ಈ ಹಿಂದಿನಿಂದಲೂ ಇದೆ. ಅಧಿಕಾರದಲ್ಲಿದ್ದಾಗ ಇಲ್ಲಿಗೆ ರಾಜಕಾರಣಿಗಳು ಭೇಟಿ ನೀಡಿದ್ದೂ ಸಹ ಕಡಿಮೆ. ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ದವು. ಆಗ ನಾನು ಉಪಮುಖ್ಯಮಂತ್ರಿಯಾಗಿದ್ದೆ, ಏನಿಲ್ಲವೆಂದರೂ 20 ಬಾರಿ ನಾನು ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಇಲ್ಲಿಗೆ ಬಂದಾಗಲೆಲ್ಲಾ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದರು.

ಇನ್ನು ಅತ್ಯಂತ ಸಂತಸದಿಂದ ನಾನು ಈ ಶಾಲೆಯ ಉದ್ಘಾಟನೆಯನ್ನು ಮಾಡಿದ್ದು, ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಚಾಮರಾಜನಗರ ಎಂದು ಮುಖ್ಯಮಂತ್ರಿಗಳು ಹೊಗಳಿದರು.

Tags: