ಚಾಮರಾಜನಗರ: ಕಾರ್ಯಕ್ರಮಕ್ಕೆ ಅನುಮತಿ ಪಡೆದಿರುವ ಅವಧಿ ಮೀರಿದ ಹಿನ್ನಲೆ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸನ್ನಿವೇಷ ಚಾಮರಾಜನಗರದಲ್ಲಿ ನಡೆದಿದೆ.
ನಗರದ ರಥ ಬೀದಿಯ ಗುರುನಂಜಪ್ಪ ಛತ್ರದ ಮುಂಭಾಗ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಸೂಲಿಬೆಲೆ ಭಾಷಣವನ್ನು ಮೊಟಕುಗೊಳಿಸಲಾಗಿದೆ.
ಸಂಜೆ 5 ರಿಂದ 8 ವರೆಗೆ ಕಾರ್ಯಕ್ರಮ ಆಯೋಜನೆಗೆ ಅನುವು ಮಾಡಿಕೊಡಲಾಗಿತ್ತು. ಆದರೆ ಸಮಯ ಮೀರಿದ ನಂತರ ಸೂಲಿಬೆಲೆ ವೇದಿಕೆ ಏರಿ ಭಾಷಣ ಮಾಡಲು ಮುಂದಾದರು. ಅದಾಗಲೇ ಸ್ಥಳಕ್ಕಾಗಮಿಸಿದ್ದ ಚುನಾವಣಾ ಅಧಿಕಾರಿಗಳು ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದರು. ಈ ವೇಳೆ ಗೊಂದಲದ ವಾತಾವರಣ ಏರ್ಪಟ್ಟಿತು. ಸ್ಥಳಕ್ಕಾಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದರು.





