Mysore
22
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಪೊಲೀಸ್‌ ಠಾಣೆ ಆವರಣದಲ್ಲೇ ಬೈಕ್‌ ಕಳ್ಳತನ: ಇಬ್ಬರು ಖದೀಮರ ಬಂಧನ

ಚಾಮರಾಜನಗರ: ಪೊಲೀಸ್‌ ಠಾಣೆಯ ಆವರಣದಲ್ಲೇ ನಿಲ್ಲಿಸಿದ್ದ ಬೈಕ್‌ನ್ನು ಕಳ್ಳರು ಕದ್ದೊಯ್ದ ಘಟನೆ ಚಾಮರಾಜನಗರದ ಸತ್ತಿ ರಸ್ತೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸ್‌ ಠಾಣೆ ಆವರಣದಲ್ಲೇ ನಿಲ್ಲಿಸಿದ್ದ ಬೈಕ್‌ ಕಳುವಾಗಿದ್ದ ಬಗ್ಗೆ ಪೊಲೀಸ್‌ ಸಿಬ್ಬಂದಿ ಶಿವಕುಮಾರ್‌ ಎಂಬುವವರು ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಠಾಣೆಯ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ.

ಈ ವೇಳೆ ಇಬ್ಬರು ಖದೀಮರು ಕಾಂಪೌಂಡ್‌ನಿಂದ ಜಿಗಿದು, ಗೇಟ್‌ ಬೀಗವನ್ನು ರಾಡ್‌ನಿಂದ ಜಿಗಿದು ಬೈಕ್‌ ಕಳ್ಳತನ ಮಾಡಿದ್ದರು.

ಸಿಸಿ ಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳಾದ ಇರ್ಫಾನ್‌ ಚೋಟು ಹಾಗೂ ಅರ್ಫಾಝ್‌ ಖಾನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

Tags:
error: Content is protected !!