ಚಾಮರಾಜನಗರ : ವನ್ಯಪ್ರಾಣಿಗಳ ದಾಳಿಗೆ ಮರಿಯಾನೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದುಕೆರೆ ವಲಯದಕಡಬೂರು ಗಸ್ತಿನ ಕೋಟೆಗೆರೆ ಕೆರೆಹಳ್ಳದ ಪಕ್ಕದಲ್ಲಿ 3-4 ವರ್ಷದ ಹೆಣ್ಣಾನೆ ಮರಿಯು ಮೃತಪಟ್ಟಿದ್ದು, ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಖಚಿತ ಪಡಿಸಿದೆ. ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ ಮೃತ ಹೆಣ್ಣು ಮರಿಯಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ತದ ನಂತರ ಮೇಲಾಧಿಕಾರಿಗಳ ಅನುಮತಿ ಪಡೆದು ವನ್ಯಪ್ರಾಣಿಗಳ ಆಹಾರಕ್ಕೆ ಆನೆ ಮೃತದೇಹವನ್ನು ಪ್ರಕೃತಿಯಲ್ಲಿ ಬಿಡಲಾಗಿದೆ.