ಚಾಮರಾಜನಗರ: ಕೇರಳದ ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆ ಇದೆ ಆಗಸ್ಟ್ 10 ರಂದು ಚಾಮರಾಜನಗರ ಜಿಲ್ಲೆಯ ಆಲೂರು ಗ್ರಾಮದಲ್ಲಿ ಜರುಗಲಿದೆ.
ಈ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಬಿ.ರಾಚಯ್ಯ ಅವರ ಹುಟ್ಟೂರಾದ ಆಲೂರಿನಲ್ಲಿ ಸುಮಾರು ಮೂರು ಎಕರೆ ಜಮೀನಿನಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರು 2017ರಲ್ಲಿ ಬಿ ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಮೊದಲಿಗೆ ಕೇವಲ 1 ಎಕರೆ ಜಮೀನಿನಲ್ಲಿ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಮುಂದುವರೆದಂತೆ ಈ ಜಾಗವನ್ನು ಸಮಾಜ ಇಲಾಖೆ ತನ್ನ ತೆಕ್ಕೆಗೆ ತೆದುಕೊಂಡು 50 ಲಕ್ಷ ರೂ ಗಳಲ್ಲಿ ಸ್ಮಾರಕ ನಿರ್ಮಾಣ ಮಾಡಲು, ಉಳಿದಂತೆ ಸ್ಮಾರಕ ಕಟ್ಟಡ, ಒಳಾಂಗಣ, ಪಾರ್ಕಿಂಗ್, ಶೌಚಾಲಯ ಸೇರಿದಂತೆ ಉದ್ಯಾವನ ನಿರ್ಮಾಣ ವೆಚ್ಚ ಈವರೆಗೆ 4.87 ಕೋಟಿ ರೂ ಖರ್ಚಾಗಿದೆ.
ಸ್ಮಾರಕ ಒಳಾಂಗಣದಲ್ಲಿ ಬಿ ರಾಚಯ್ಯ ಅವರ ಜೀವನ ಚರಿತ್ರೆಯನ್ನು ಸಾರುವ ಚಿತ್ರಗಳು, ಬಿ ರಾಚಯ್ಯ ಅವರ ಬಗೆಗಿನ ಇತರೆ ಮಾಹಿತಗಳು ಒಳಗೊಂಡಿರಲಿವೆ.