ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆತರುವ ಉದ್ದೇಶದಿಂದ ಜಿಲ್ಲಾಡಳಿತ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರ ಭಾಗವಾಗಿ ಚಾಮರಾಜನಗರದ ಮಾಂಗಲ್ಯ ಮದುವೆ ಮಂಟಪದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಲಕ್ಷ್ಮೀ ಅವರು ನವ ವಧು-ವರರಿಗೆ ಮದುವೆ ಶುಭಾಶಯ ಕೋರುವ ಜತೆಗೆ ಆಗಮಿಸಿದ್ದ ಜನರಿಗೆ ತಪ್ಪದೇ ಮತದಾನ ಮಾಡುವಂತೆ ಪ್ಲೇಕಾರ್ಡ್ ಹಿಡಿದು ಜಾಗೃತಿ ಮೂಡಿಸಿದರು.
ಸಾರ್ವಜನಿಕರು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಹಾಗೂ ನನ್ನ ಮತ, ನನ್ನ ಹಕ್ಕು ಎನ್ನುವ ಪ್ಲೇಕಾರ್ಡ್ ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ ಚುನಾವಣಾ ಆಯೋಗದ ನಾ ಭಾರತ ಗೀತೆಯನ್ನು ಪ್ರಸಾರ ಮಾಡಲಾಯಿತು.