ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ತಾಲ್ಲೂಕಿನ ಮಂಚಹಳ್ಳಿ ಹಾಗೂ ಸವಕನಹಳ್ಳಿ ಪಾಳ್ಯದಲ್ಲಿ ಕಾಡಾನೆಗಳ ದಾಳಿಯಿಂದ ಫಸಲು ನಾಶವಾಗುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಕಾಡಾನೆ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಹಾಗೂ ಕಾಡಾನೆಗಳನ್ನು ನಿಯಂತ್ರಣ ಮಾಡುವಂತೆ ಒತ್ತಾಯಿಸಿ ಓಂಕಾರ್ ಅರಣ್ಯ ವಲಯಾಧಿಕಾರಿಗಳ ಕಚೇರಿಗೆ ತೆರಳಿ ರೈತರು ಮನವಿ ಸಲ್ಲಿಸಿದರು.
ವಲಯಾಧಿಕಾರಿ ಹನುಮಂತಪ್ಪ ಪಾಟೀಲ್‌ರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತರು, ಮಂಚಹಳ್ಳಿ ಗ್ರಾಮದಲ್ಲಿ ಸತತವಾಗಿ ಕಾಡಾನೆಗಳ ಹಾವಳಿಯಿಂದ ರೈತರ ಜಮೀನಲ್ಲಿ ಅಳವಡಿಸಿರುವ ಸುತ್ತುಬೇಲಿ, ಕೃಷಿಗೆ ಬಳಸುವ ಪೈಪ್‌ಗಳು, ತೆಂಗು, ಸೇರಿದಂತೆ ತರಕಾರಿ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅಪಾರ ನಷ್ಟವಾಗಿದೆ. ಕೂಡಲೇ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳನ್ನು ಜಮೀನುಗಳಿಗೆ ಬರದಂತೆ ನಿಯಂತ್ರಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಚಳ್ಳಿ ಗ್ರಾಮದ ಎಂ ನಂದೀಶ್, ಮಾದೇಶ, ವಿಶ್ವನಾಥ್, ಮಹದೇವಪ್ಪ, ಎಂ ಆರ್ ಮಹದೇವಪ್ಪ, ಮೀಸೆ ಮಹದೇವಪ್ಪ, ನಂಜುಂಡಿ, ಗುರುಪ್ರಸಾದ್, ಭರತ್ ಕುಮಾರ್, ಸವಕನಳ್ಳಿ ಪಾಳ್ಯದ ಮಹದೇವು. ಮಹದೇವಯ್ಯ, ರಾಚಯ್ಯ, ಸುರೇಶ್, ಸೇರಿದಂತೆ ಮತ್ತಿತರರಿದ್ದರು.




