ಚಾಮರಾಜನಗರ: ನಿರ್ಮಾಣ ಹಂತದ ಮನೆ ಕೆಲಸ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿಂದು (ಜೂನ್.4) ನಡೆದಿದೆ.
ಹುರುಳಿನಂಜನ ಪುರ ಗ್ರಾಮದ 45 ವರ್ಷದ ಬಾಬು ಎಂಬುವವರೇ ಮೃತರಾದವರಾಗಿದ್ದಾರೆ. ಇಲ್ಲಿನ ಕುರುಬರ ಹುಂಡಿ ಗ್ರಾಮದಲ್ಲಿನ ಮನೆಯೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುವ ವೇಳೆ ಮಳೆ ಬಂದಿದೆ.
ಮಳೆ ನಿಂತ ಬಳಿಕ ಕೆಲಸ ಮಾಡಲು ಮುಂದದಾಗ ಮಳೆ ನೀರಿನಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಬಾಬು ಸ್ಥಳದಲ್ಲೇ ಮೃತರಾಗಿದ್ದಾರೆ. ಅವರ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸ್ಥಿತಿ ಗಂಭೀರವಾಗಿದೆ.
ಈ ಸಂಬಂಧ ಹೊಂಗನೂರು ಗ್ರಾಮದ ಯುವ ಹರೀಶ್ ಕುಮಾರ್ ಎಚ್.ಎಂ ಎಂಬುವವರು “ಆಂದೋಲನ ಡಿಜಿಟಲ್”ಗೆ ಮಾಹಿತಿ ನೀಡಿದ್ದಾರೆ.





