ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಕಾಡೆಮ್ಮೆಯೊಂದು ಗಾಯಗೊಂಡು ಪಾಲಾರ್ ರಸ್ತೆಯಲ್ಲಿ ಕುಂಟುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಪಾಲಾರ್ ಚೆಕ್ ಪೋಸ್ಟ್ ಸಮೀಪದ ಸೇತುವೆಯ ಬಳಿ ಬೃಹತ್ ಗಾತ್ರದ ಕಾಡೆಮ್ಮೆಯ ಬಲಗಾಲು ಗಾಯಗೊಂಡು ಕುಂಟುತ್ತಾ ರಸ್ತೆ ದಾಟುತ್ತಿದೆ. ಇದನ್ನು ವಾಹನ ಸವಾರರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ . ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡಿರುವ ಕಾಡೆಮ್ಮೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ವನ್ಯ ಪ್ರಿಯರು ಮನವಿ ಮಾಡಿದ್ದಾರೆ.
ಪಾದಯಾತ್ರೆ ಸ್ಥಳದಲ್ಲಿ ಕಾಡಾನೆ ಪ್ರತ್ಯಕ್ಷ: ಮಲೆ ಮಹದೇಶ್ವರ ಬೆಟ್ಟದ ತಪ್ಪಲು ತಾಳುಬೆಟ್ಟದಿಂದ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರಿಕರ ಮಾರ್ಗದಲ್ಲಿ( ರಂಗಸ್ವಾಮಿ ಒಡ್ಡು) ಪ್ರತ್ಯಕ್ಷವಾಗಿದ್ದು ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಭಕ್ತಾದಿಗಳು ಅರಣ್ಯ ಮಾರ್ಗ ಮಧ್ಯದಲ್ಲಿ ತೆರಳುವಾಗ ಎಚ್ಚರಿಕೆಯಿಂದ ತೆರಳಬೇಕಿದೆ.





