ಗುಂಡ್ಲುಪೇಟೆ : ತಾಲ್ಲೂಕಿನ ಬೇಗೂರಿನ ಶಾಲೆಯ ವಿದ್ಯಾರ್ಥಿ ಸಮೀಪದ ಕುಲಗಾಣ ಗ್ರಾಮದ ಮೂರ್ತಿ ಮಹೇಶ್ವರಿ ಅವರ ಪುತ್ರ ಉಲ್ಲಾಸ್ (9) ಹೃದಯಘಾತದಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಬೇಗೂರು ಗ್ರಾಮದ ನ್ಯಾಷನಲ್ ಶಾಲೆಯಲ್ಲಿ 4 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅನಾರೋಗ್ಯದ ಕಾರಣದಿಂದ ಎರಡು ದಿನಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದಿದ್ದಾನೆ. ಬಳಿಕ ಆಸ್ಪತ್ರೆಯಿಂದ ಮನೆಗೆ ತೆರುಳುವ ವೇಳೆ ಲೋ ಬಿಪಿ ಯಿಂದ ಹೃದಯಾಘಾತವಾಗಿ ಸಾವಿಗಿಡಾಗಿದ್ದಾನೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಮಕ್ಕಳೂ ಸಹ ಲೋ ಬಿಪಿ, ಹೃದಯಾಘಾತದಿಂದ ಮೃತಪಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಪೋಷಕರಲ್ಲಿ ಅತಂಕ ಮನೆ ಮಾಡಿದ್ದು, ಅಹಾರ ಪದ್ದತಿ ಹಾಗೂ ಒತ್ತಡದಂತಹ ಸಮಸ್ಯೆಯಿಂದ ಹೀಗಾಗುತ್ತಿದೆ ಎನ್ನಲಾಗಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.





