ಚಾಮರಾಜನಗರ: ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ನೆನೆ ರಾತ್ರಿ ಸುರಿದ ಬಾರಿ ಮಳೆಗೆ ಗ್ರಾಮದ ಹತ್ತಾರು ಮನೆಗಳಿಗೆ ಹಾಗೂ ಧನದ ಕೊಟ್ಟಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಯಲ್ಲಿ ಇದ್ದ ಪಾತ್ರೆ-ಪಗಡೆ, ಮನೆಯ ಸಮಗ್ರಿಗಳು ಚೆಲ್ಲಪಿಲಿಯಾಗಿದ್ದಾವೆ. ಜೊತೆಗೆ ಧನದ ಕೊಟ್ಟಿಗೆಗಳಿಗೆ ನೀರು ನುಗ್ಗಿ ರಾತ್ರಿಯಲ್ಲ ಹಸು,ಕರುಗಳು ನೀರಲ್ಲಿ ನಿಂತಿವೆ, ಧನಗಳಿಗೆ ಶೇಖರಿಸಿದ ಮೇವು ಸಂಪೂರ್ಣವಾಗಿ ಹಾಳಾಗಿದೆ.
ಬೆಳಗಿನ ಜಾವ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರ ಸಹಾಯದಿಂದ ಬಾಡಿಗೆಗೆ ಡೀಸೆಲ್ ಮೋಟಾರ್ ಗಳಿಗೆ ಪೈಪ್ ಗಳನ್ನು ಜೊಡನೆ ಮಾಡಿ ಅಕ್ಕಪಕ್ಕದ ಜಮೀನುಗಳಿಗೆ, ಚರಂಡಿ, ಕಾಲುವೆಗಳಿಗೆ ನೀರನ್ನು ಹೊರ ಹಾಕುವ ಕಾರ್ಯ ನಡೆಯಿತು..
ಒಂದೆಡೆ ಡೀಸೆಲ್ ಮೋಟಾರ್ ಮುಖಾಂತರ ನೀರನ್ನು ಹೊರ ತೆರೆಯುವ ಕೆಲಸ ನಡೆಯುತ್ತಿದ್ದರೆ, ಇನ್ನೊಂದೆಡೆ ಹೆಚ್ಚು ಮಳೆ ಆದಾ ಕಾರಣ ಭೂಮಿಯಿಂದ ಒಳಾರಿವು ಹೆಚ್ಚಾಗುತ್ತಿದ್ದು ಮನೆಯ ಮನೆ. ಒಳಗಡೆ ನೀರು ನುಗ್ಗುತ್ತಿದೆ.