ಚಾಮರಾಜನಗರ:ಗಣೇಶ ಹಬ್ಬದ ಹಿಂದಿನ ದಿನ ಮಣ್ಣಿನ ಗಣಪನ ಮೂರ್ತಿಗಳ ಮಾರಾಟಕ್ಕೆ ಜನರು ಮುಗಿಬಿದ್ದಿದ್ದು ಡಾ.ಪುನೀತ್ ರಾಜ್ ಕುಮಾರ್ ಜೊತೆಗಿನ ಗಣಪ ಭಾರಿ ಬೆಲೆಗೆ ಮಾರಾಟವಾಗಿದೆ.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಇರುವ ಗಣಪತಿ ಮೂರ್ತಿಗಳ ಮಾರಾಟ ಮಳಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗಿರುವ ಗಣೇಶನ ಮೂರ್ತಿಗೆ ಭಾರಿ ಬೇಡಿ ಒಂದೇ ಮೂರ್ತಿ ಇದ್ದು ನರಸೀಪುರ ಮೂಲದ ಯುವಕರು ಸುಮಾರು ೧೩ ಸಾವಿರ ನೀಡಿ ಮೂರ್ತಿಯನ್ನು ಖರೀದಿಸಿದ್ದಾರೆ ಎಂದು ಆಂದೋಲನ ಪತ್ರಿಕೆಗೆ ಮಾರಾಟಗಾರ ವಿನಯ್ ಕುಮಾರ್ ಮಾಹಿತಿ ನೀಡಿದರು.