Mysore
27
overcast clouds

Social Media

ಶನಿವಾರ, 13 ಜೂನ್ 2026
Light
Dark

ಚಾ. ನಗರ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ಇನ್ನಿಲ್ಲ

ಚಾಮರಾಜನಗರ : ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಬ್ರಿಟಿಷರ ಲಾಠಿಕ್ಕಿತು ಬಿಸಾಡುತ್ತಿದ್ದ ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ್ತಿ ಲಲಿತಾ ಟಾಗೆಟ್ ಅವರು ನಿಧನರಾಗಿದ್ದಾರೆ.

ವಯೋಜಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಇವರು ಇತ್ತೀಚಿಗಷ್ಟೇ 91ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಂದಿನ ಸ್ವಾತಂತ್ರ ಹೋರಾಟದ ದಿನಗಳಲ್ಲಿ ಇವರು ಪೊಲೀಸರ ಲಾಠಿಗಳನ್ನು ಕಿತ್ತುಕೊಂಡು ಬಿಸಾಡುತ್ತಿದ್ದರಂತೆ. ಹಾಗೂ ಪೊಲೀಸ್ ಠಾಣೆಗಳ ಮುಂದೆ ತೆರಳಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪರಾರಿ ಆಗುತ್ತಿದ್ದರಂತೆ. ಮನೆಯ ಒಳಗೆ ಕೂಡಿಹಾಕಿದರು ಸಹ ಮೇಲ್ಚಾವಣಿ ಹೆಚ್ಚು ತೆಗೆದು ಹೊರ ಹೋಗಿ ಪ್ರತಿಭಟನೆಯಲ್ಲಿ ತೊಡೆಗಿಕೊಳ್ಳುತ್ತಿದ್ದರಂತೆ.

ಮೃತರ ಅಂತ್ಯಕ್ರಿಯೆಯು ಚಾಮರಾಜನಗರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!