Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

BRT ಹುಲಿ ಸಂರಕ್ಷಿತ ಪ್ರದೇಶದ ‘ಝಾನ್ಸಿ’ ಶ್ವಾನ ಸಾವು

ಚಾಮರಾಜನಗರ: ಅರಣ್ಯ ಅಪರಾಧಗಳ ಪತ್ತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ‌ಲ್ಲಿ ನಿಯೋಜಿಸಲಾಗಿದ್ದ ತರಬೇತಿ ಪಡೆದ ಶ್ವಾನ ಝಾನ್ಸಿ ವಾರದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದೆ. 

ಡಿ.30ರಂದೇ ಘಟನೆ ನಡೆದಿದ್ದರೂ, ಮಾಹಿತಿ ಬಹಿರಂಗಗೊಂಡಿರಲಿಲ್ಲ. ಶ್ವಾನವನ್ನು ಪುಣಜನೂರಿನಲ್ಲಿ ನಿಯೋಜಿಸಲಾಗಿತ್ತು. ತರಬೇತಿ ಪಡೆದು ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ನಾಯೊಂದನ್ನು ಬೆನ್ನಟ್ಟಿಕೊಂಡು ಹೋದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚಾಮರಾಜನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜರ್ಮನ್‌ ಶೆಫರ್ಡ್‌ ತಳಿಯಹೆಣ್ಣು ಶ್ವಾನವನ್ನು 2021ರ ನವೆಂಬರ್‌ 25ರಂದು ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಲಾಗಿತ್ತು. ಆಗ ಅದಕ್ಕೆ ಒಂಬತ್ತು ತಿಂಗಳು ವಯಸ್ಸಾಗಿತ್ತು.

ಟ್ರಾಫಿಕ್‌ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ‌ಝಾನ್ಸಿಯನ್ನು ಇಲಾಖೆಯ ಸೇವೆಗೆ ನಿಯೋಜಿಸಲಾಗಿತ್ತು. ಇದಕ್ಕೂ ಮೊದಲು ಏಳು ತಿಂಗಳ ಕಾಲ ಚಂಡೀಗಡದ ಐಟಿಬಿಪಿ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆಗೆ ಸಂಬಂಧಿಸಿದ ತರಬೇತಿಯನ್ನು ಅದಕ್ಕೆ ನೀಡಲಾಗಿತ್ತು.

ಅರಣ್ಯ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಯಾವುದೇ ಕಾರ್ಯಾಚರಣೆಗಳಲ್ಲಿ ಶ್ವಾನ ಭಾಗವಹಿಸಿರಲಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!