ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರ ಅಂತ್ಯಕ್ರಿಯೆಯು ಶನಿವಾರ ಸಿದ್ದರಾಮನಹುಂಡಿ ಪಕ್ಕದ ಹೊಸಹಳ್ಳಿ ಬಳಿ ಇರುವ ಜಮೀನಿನಲ್ಲಿ ನೆರವೇರಿತು. ಸಿದ್ದರಾಮಯ್ಯ ಅವರ ತಂದೆ, ತಾಯಿ, ಅಣ್ಣನ ಸಮಾಧಿ ಬಳಿಯೇ ಕಿರಿಯ ತಮ್ಮನ ಪಾರ್ಥೀವ ಶರೀರವನ್ನು ಮಣ್ಣು ಮಾಡಲಾಯಿತು.
ಬಾಚುಕರಾದ ಸಿದ್ದರಾಮಯ್ಯ ಅವರು ನನ್ನ ಪ್ರೀತಿಯ ತಮ್ಮ ರಾಮೇಗೌಡ. ಅವನು ಯಾವಾಗಲೂ ‘ನೀನು ಮುಖ್ಯಮಂತ್ರಿ ಆಗಿದ್ದೀಯ, ಹಂಗೆ ಚೆನ್ನಾಗಿರುವ. ಮನೆ, ಹೊಲ, ಗದ್ದೆ ನಾನು ನೋಡಿಕೊಳ್ಳುತ್ತೇನೆ. ನೀ ಚೆನ್ನಾಗಿರು ಅಷ್ಟೇ ಸಾಕು’ ಅನ್ನುತ್ತಿದ್ದ ಎಲ್ಲ ಕೆಲಸನೂ ಅವನೇ ಮಾಡುತ್ತಿದ್ದೆ. ಪ್ರೀತಿಯ ಸಹೋದರ. ನಮ್ಮಣ್ಣ ಚೆನ್ನಾಗಿರಲಿ ಅಂತ ಭಾವಿಸುತ್ತಿದ್ದ. ಅವನಾಯಿತು, ಗದ್ದೆ ಆಯಿತು, ಮನೆ ಆಯಿತು, ಬೇಸಾಯ ಆಯಿತು ಅಷ್ಟೆ. ಎಂದೂ ನನ್ನ ರಾಜಕೀಯಕ್ಕೆ ತೊಂದರೆ ಕೊಡಲಿಲ್ಲ. ಬೆನ್ನಲುಬಾಗಿ ನಿಂತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರನ ಜತೆಗಿನ ಒಡನಾಟ ನೆನೆದು ಕಣ್ಣೀರಾದರು.