ಹನೂರು: ದಿವಂಗತ ದೇವರಾಜು ಅವರು ಕಾಂಗ್ರೇಸ್ ಕಾರ್ಯಕರ್ತರಾಗಿ ಇರಲಿಲ್ಲ, ನಮ್ಮ ಕುಟುಂಬದ ಸದಸ್ಯರಾಗಿ, ನನ್ನ ಅಣ್ಣನಾಗಿ ಮಾರ್ಗದರ್ಶಕರಾಗಿದ್ದವರು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ದಿವಂಗತ ಶ್ರೀ ದೇವರಾಜು ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದವರು, ದಿವಂಗತ ರಾಜೂಗೌಡರ ಅವರ ಜೊತೆ ಹತ್ತಿರದಿಂದ ಒಡನಾಡ ಇಟ್ಟುಕೊಂಡಿದ್ದವರು, ದಿ.ದೇವರಾಜು ರವರು ಕಳೆದ ೪೨ ವರ್ಷಗಳ ಹಿಂದೆ ದ್ವಿತೀಯ ಪಿಯುಸಿಯನ್ನು ಮುಗಿಸಿ ರಾಜಕೀಯಕ್ಕೆ ಕಾಲಿಟ್ಟಗಿಲಿಂದಲೂ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಅವರು ಹಿಂದುಳಿದ ವರ್ಗ, ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಮೂಂಚೂಣಿಯಲ್ಲಿದ್ದವರು ಅವರು ನಮಗೆ ನೀಡುತ್ತಿದ್ದ ಮಾರ್ಗದರ್ಶನದಲ್ಲಿ ಶೇಕಡ ೯೯.೯ನ ರಷ್ಟು ಸರಿಯಾಗಿರುತ್ತಿತ್ತು ಅಂತಹ ನಿಷ್ಟಾವಂತ ಹಾಗೂ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುಃಖಕರ ಸಂಗಾತಿ ಎಂದು ಭಾವುಕರಾಗಿ ಹೇಳಿದರು.
ಬಾಲ್ಯ ಸ್ನೇಹಿತ ನಿವೃತ್ತ ಪ್ರಾಂಶುಪಾಲರಾದ ಸಿಂಗಾನಲ್ಲೂರು ಸಿದ್ದರಾಜು ಮಾತನಾಡಿ ದಿ.ದೇವರಾಜು ಅವರು ಬಾಲ್ಯದಿಂದಲ್ಲೇ ಹೋರಾಟ ಮನೋಭಾವನೆ ಬೆಳಿಸಿಕೊಳ್ಳುವುದರ ಮೂಲಕ ಪಿಯುಸಿ ಮುಗಿಸಿ ನಂತರ ರಾಜಕೀಯಕ್ಕೆ ಪಾದರ್ಪಣೆ ಮಾಡಿ ಜನ ಮನ್ನಣೆ ಗಳಿಸಿದಂತಹ ವ್ಯಕ್ತಿ, ಹಾಗೂ ಅವರು ರಾಜಕೀಯಕ್ಕೆ ಬಂದಗಿನಿಂದಲೂ ಕಾಂಗ್ರೇಸ್ ಪಕ್ಷದಲ್ಲೇ ನಿಷ್ಠವಂತ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತವರು, ಅವರ ಮೃತಪಟ್ಟಿದ್ದ ವೇಳೆ ಅಂತ್ಯಕ್ರಿಯೆ ಮುಗಿಯುವ ತನಕ ಇದ್ದಂತಹ ಏಕೈಕ ಶಾಸಕ ಅಂದರೆ ಅದು ನರೇಂದ್ರ ರಾಜೂಗೌಡ ಅವರು ಜೊತೆಗೆ ಅವರ ಕೊನೆ ಆಸೆ ಮುಂದಿನ ಚುನಾವಣೆಯಲ್ಲಿ ಶಾಸಕ ಆರ್.ನರೇಂದ್ರವನ್ನು ಗೆಲ್ಲಿಸುವ ಮೂಲಕ ಸಚಿವರನ್ನಾಗಿ ಮಾಡಬೇಕು ಎಂದು ಊರಿನ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಚೆರ್ಚಿಸುತ್ತಿದ್ದರೂ ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಉತ್ತಮ ಜನ ಸಂಪರ್ಕ ಹೊದಂತಹ ವ್ಯಕ್ತಿ ಎಂದು ತಿಳಿಸಿದರು.
ಇದೇ ವೇಳೆ ಯುವ ಕಾಂಗ್ರೇಸ್‌ನ ಜಿಲ್ಲಾಧ್ಯಕ್ಷ ಚೇತನ್ ದೂರೆರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಡೇಶ್ವಸ್ವಾಮಿ, ಮುಖಂಡರಾದ ಪಾಳ್ಯ ಕೃಷ್ಣ, ಉದ್ದನೂರು ಸಿದ್ದರಾಜು, ಮಹಾದೇವ ಹಾಗೂ ಇನ್ನಿತರರು ಭಾಗವಹಿಸಿದ್ದರು.