ಮಂಡ್ಯ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡ್ ನಲ್ಲಿಂದು ಬಿಜೆಪಿ ಮುಖಂಡರಾದ ಎಚ್. ಜಿ. ಸುರೇಶ್ ಅವರು ಸೇರಿದಂತೆ ಬಿಜೆಪಿಯ ನೂರಾರು ಮುಖಂಡರು ಕಾರ್ಯಕರ್ತರು ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸಂಸದರಾದ ಪ್ರಜ್ವಲ್ ರೇವಣ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ಮಂಜುನಾಥ್, ಜೆಡಿಎಸ್ ಮುಖಂಡರಾದ ಕೆ. ಸಿ. ವೆಂಕಟೇಶ್, ನರಸಿಂಹ ಮೂರ್ತಿ, ರುದ್ರೇಗೌಡ್ರು, ಜಯರಾಮ್ ನರಸಿಂಹ, ಆರ್. ಕೆ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.