ಮೈಸೂರು: ಸಿದ್ದರಾಮಯ್ಶ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಬಿಜೆಪಿ ಕಾತುರದಿಂದ ಕಾಯುತ್ತಿದ್ದದ್ದು ಏಕೆ ಎಂಬುದು ಈಗ ಸ್ಪಷ್ಟವಾಗಿದೆ. ಸಿದ್ದರಾಮಯ್ಶ ಅವರು ಸ್ಪರ್ಧಿಸುವ ಕ್ಷೇತ್ರದಲ್ಲಿ ಮತದಾರರ ಮಾಹಿತಿ ಡಿಲೀಟ್ ಮಾಡಿಸಿ ಅವರನ್ನು ಸೋಲಿಸಲು ಪ್ಲ್ಯಾನ್ ಮಾಡಿತ್ತು ಎಂಬ ಅನುಮಾನ ವ್ಯಕ್ಯವಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಿಜೆಪಿ ಸಿದ್ದರಾಮಯ್ಯ ಅವರೇ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದು ಪದೇ ಪದೇ ಕೇಳುತ್ತಿತ್ತು. ಇದೀಗ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಮತದಾರರ ಹೆಸರು ಪಟ್ಟಿಯಿಂದಲೇ ನಾಪತ್ತೆಯಾಗಿರುವುದನ್ನು ನೋಡಿದರೇ, ಬಿಜೆಪಿ ಅದಕ್ಕಾಗಿಂ ಸಿದ್ದರಾಮಂ ಅವರನ್ನು ಎಲ್ಲಿ ಸ್ಪರ್ಧಿಸುತ್ತೀರಿ ಎಂಬುದನ್ನು ಕೇಳುತ್ತಿತ್ತು ಅನ್ನಿಸುತ್ತಿದೆ. ಅಲ್ಲದೇ ಕಳೆದ ಲೋಕಸಭಾ ಚುನಾವಣೆಂಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರ ಸೋಲಿಗೂ ಇದೇ ಕಾರಣವಾ? ಅನ್ನೋ ಸಂಶಯ ವ್ಯಕ್ತವಾಗುತ್ತಿದೆ.
ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳು ಕೂಡ ಇದರಲ್ಲಿ ಶಾಮಿಲಾಗಿರುವುದು ಈಗಾಗಲೇ ಬಂಲಾಗಿದೆ. ಸುಮಾರು ೨೦ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳಿಗೆ ಇ- ಮೇಲ್ ಮಾಡಿದ್ದು ಅದರಲ್ಲಿ, ಸರ್ವೇ ಮಾಡಿ ನಿಮಗೆ ಸಹಾಂ ಮಾಡ್ತೀವಿ. ನಮ್ಮ ಕೆಲಸಕ್ಕೆ ಇಂತಿಷ್ಟು ದುಡ್ಡು ತೆಗೆದುಕೊಳ್ತೀವಿ ಎಂದು ತಿಳಿಸಲಾಗಿದೆ. ಇದಕ್ಕೆ ಒಂದಷ್ಟು ರಾಜಕಾರಣಿಗಳು ಕೂಡ ರಿಪ್ಲೆ ಮಾಡಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ಅಲ್ಲದೇ ಬಿಜೆಪಿ ಸಚಿವರ ಖಾಲಿ ಚೆಕ್ ಸಿಕ್ಕಿದೆ. ದುಡ್ಡು ಸಹ ಸಿಕ್ಕಿದೆ ಅನ್ನೊ ಮಾಹಿತಿಯಿದೆ. ಮಂತ್ರಿಂ ದುಡ್ಡು, ಚೆಕ್ ಅಲ್ಲಿ ಏಕೆ ಸಿಕ್ತು? ಆ ಮಂತ್ರಿಯನ್ನು ಇಟ್ಟುಕೊಂಡು ಂವ ತನಿಖೆ ನಡೆಸುತ್ತೀರಿ? ಮುಖ್ಯಮಂತ್ರಿಗಳು ಪ್ರಾಮಾಣಿಕವಾಗಿದ್ದೀವಿ ಅನ್ನೋದಾದ್ರೆ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಅಲ್ಲದೇ ಚೆಕ್ ಪತ್ತೆಯಾಗಿರುವ ಬಿಜೆಪಿ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದ್ದರಿಂದ ಸಿದ್ದರಾಮಯ್ಯನವರು ಮತ್ತು ಅವರ ಅನುಂಯಿಗಳು ಸ್ಪರ್ಧಿಸುವ ಕ್ಷೇತ್ರದಲ್ಲಿ ಅವರ ಅಭಿಮಾನಿಗಳು ಈಗಿನಿಂದಲೇ ಎಚ್ಚರಿಕೆಯಿಂದ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಎಚ್ಚೆತ್ತುಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪರವಾಗಿ ಬಿ.ಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ.