ಮಡಿಕೇರಿ: ಮನೆಯ ಶೀಟ್ ಕೆಳಭಾಗದಲ್ಲಿ ಸೇರಿದ್ದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಸ್ನೇಕ್ ಸುರೇಶ್ ಯಶಸ್ವಿಯಾಗಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದ ಕುಂಬಾರ ಗುಂಡಿ ರಾಜೇಶ್ ಎಂಬವರ ಮನೆಯ ಒಳಗಿದ್ದ ಹಾವನ್ನು ರಕ್ಷಿಸಲಾಗಿದೆ. ಮನೆಯಲ್ಲಿ ಹಾವು ಕಂಡು ಭಯಭೀತರಾದ ರಾಜೇಶ್ ಕುಟುಂಬ ಕೂಡಲೇ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅಡುಗೆ ಕೋಣೆಯ ಮೇಲೆ ಹಾವು ಇರುವುದು ಕಂಡುಬಂತು. ಬಳಿಕ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸೆರೆ ಹಿಡಿಯಲಾಯಿತು.