Mysore
29
overcast clouds

Social Media

ಶನಿವಾರ, 13 ಜೂನ್ 2026
Light
Dark

ಭಾರತ್ ಜೋಡೊ ಯಾತ್ರೆ ಸಂಬಂಧ ಬಂದೋಬಸ್ತ್ ಪರಿಶೀಲನೆ

ಮೈಸೂರು : ಕಾಂಗ್ರೆಸ್ ಪಕ್ಷದ ವತಿಯಿಂದ  ನಡೆಸಲಾಗುತ್ತಿರುವ ಭಾರತ್ ಜೋಡೊ ಯಾತ್ರೆ ಸಂಬಂಧವಾಗಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್ ಅವರು ಬಂದೋಬಸ್ತ್  ಅನ್ನು ಪರಿಶೀಲನೆ ನಡೆಸಿದರು.

ನಾಳೆ ಬದನವಾಳು ಖಾದಿ ಗ್ರಾಮೋದ್ಯಮ ಕೇಂದ್ರದಲ್ಲಿ ರಾಹುಲ್ ಗಾಂಧಿ ಅವರು ಗಾಂಧೀ ಜಯಂತಿಯನ್ನು ಆಚರಣೆ ಮಾಡಲಿದ್ದು. ಬಳಿಕ ಮಧ್ಯಾಹ್ನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಕಡಕೋಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆ ಮುಂದುವರೆಯಲಿದ್ದು ಮೈಸೂರು ನಗರದ ಅರಮನೆ ಮೈದಾನದ ಎದುರಿನ ವಸ್ತು ಪ್ರದರ್ಶನ ಆವರಣದಲ್ಲಿ ತಂಗಲಿದೆ.

ಅಕ್ಟೋಬರ್ 3ರಂದು ಅಂದರೆ ನಾಲ್ಕನೇ ದಿನ ಮೈಸೂರಿನಿಂದ ಯಾತ್ರೆ ಆರಂಭಗೊಳ್ಳಲಿದೆ ಈ ದಿನಗಳಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಗೊಂಡಿರುತ್ತದೆ. ಇಲ್ಲಿಂದ ಹೊರಟ ಯಾತ್ರೆಯೂ ಕೆನಲು ಗ್ರಾಮದ ವನಜ ಸುಂದರ ಸಭಾಂಗಣದಲ್ಲಿ ಉಪಹಾರ ಸೇವಿಸಿ ಟಿ ಎಸ್ ಛತ್ರ ಗ್ರಾಮವನ್ನು ಪ್ರವೇಶಿಸಲಿದೆ ರಾತ್ರಿ ಅಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಉಳಿದುಕೊಳ್ಳಲಿದೆ.

 

 

 

ಅ.4 ಮತ್ತು 5ರಂದು ಪಾದಯಾತ್ರೆಗೆ ವಿಶ್ರಾಂತಿ ಇದ್ದು, ಏಳನೆ ದಿನ ಮಂಡ್ಯದ ಶ್ರೀ ಮಹದೇಶ್ವರ ದೇವಸ್ಥಾನದಿಂದ ಪುನರಾರಂಭಗೊಳ್ಳಲಿದೆ. ನಾಗಮಂಗಲದ ಚೌಡೇನಹಳ್ಳಿ ಗೇಟ್‍ನಿಂದ ನಡೆಯುವ ಪಾದಯಾತ್ರೆ ರಾತ್ರಿ ಎಂ.ಹೊಸೂರು ಗೇಟ್‍ನ ಬರಮದೇವರಹಳ್ಳಿಯಲ್ಲಿ ತಂಗಲಿದೆ. ಎಂಟನೆ ದಿನ ವಿಸ್ಡಂ ಶಾಲೆಯಿಂದ ಆರಂಭಗೊಂಡು ನಾಗಮಂಗಲದ ಅಂಚೆಚಿಟ್ಟನ ಹಳ್ಳಿಯಿಂದ ಮುಂದುವರೆದು ಆದಿಚುಂಚನಗಿರಿ ಮಠದ ಬೇಳ್ಳುರು ಟೌನ್‍ನಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!