ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಭಾರತ್ ಸಂಕಲ್ಪ ಯಾತ್ರೆ ವಾಹನವು ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದು ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದೆ.
ಮೈಸೂರಿನ ಗ್ರಾಮೀಣ ಭಾಗದ ಜನರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಹಾಗೂ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.
ಈ ವಿಶೇಷ ವಾಹನದಲ್ಲಿ ನರೇಂದ್ರ ಮೋದೆ ನೇತೃತ್ವದ ಕೇಂದ್ರ ಸರ್ಕಾರದ ಗ್ಯಾರೆಂಟಿ ಹಾಗೂ ಯೋಜನೆಗಳ ಬಗ್ಗೆ ಎಲ್‌ಇಡಿ ಪರದೆಯ ಮೇಲೆ ಮಾಹಿತಿ ಬಿಂಬಿಸಲಾಗುತ್ತಿದೆ.
ಅದರೊಟ್ಟಿಗೆ ಮೋದಿ ಅವರ ಭಾಷಣಗಳನ್ನು ಪ್ರಸಾರ ಮಾಡಿಕೊಂಡು ಬರಲಾಗುತ್ತಿದೆ. ಭಾರತ್ ಸಂಕಲ್ಪ ಯಾತ್ರೆ ವಾಹನ ಜ.25ರವರೆಗೆ ಮೈಸೂರು ಜಿಲ್ಲಾದ್ಯಂತ ತೆರಳಲಿದ್ದು ಮನೆ ಮನೆಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ.