ಹನೂರು: ಸಮಾಜದಲ್ಲಿನ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಕಟುವಾಗಿ ತಮ್ಮ ಕೀರ್ತನೆಗಳ ಮೂಲಕ ಖಂಡಿಸಿದ ಭಕ್ತ ಶ್ರೇಷ್ಠ ಕನಕದಾಸರ ತತ್ವ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಅನುಕರಣಿಯ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು .
ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕುಲ ಕುಲ ಕುಲವೆಂದು ಹೊಡೆದಾಡಾದಿರಿ ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎನ್ನುವ ಮೂಲಕ 15-16ನೇ ಶತಮಾನದಲ್ಲೇ ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಹೊರಹಾಕಿದ್ದರು. ಕನಕದಾಸರು ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಎಂದು ತಿಳಿಸಿದರು.
ನಿರಂತರ ಮಳೆ ನಡುವೆ ಮೆರವಣಿಗೆ : ಶುಕ್ರವಾರ ಬೆಳಿಗ್ಗೆ ಪ್ರಾರಂಭವಾದ ಜಿಟಿಜಿಟಿ ಮಳೆಯ ನಡುವೆಯೂ ಕಲಾತಂಡಗಳು, ವಾದ್ಯ ಮೇಳಗಳೊಂದಿಗೆ ಸಾಗಿತು. ಈ ವೇಳೆ ಶಾಸಕ ಆರ್. ನರೇಂದ್ರ, ತಹಸಿಲ್ದಾರ್ ಆನಂದಯ್ಯ, ಅವರು ಸೇರಿದಂತೆ ವಿವಿಧ ಮುಖಂಡರುಗಳು ಮೆರವಣಿಗೆಯಲ್ಲಿ ಸಾಗಿದರು. ನಿರಂತರ ಮಳೆಯಲ್ಲೂ ವೀರಗಾಸೆಯವರು ತಾಳಮೇಳಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಆನಂದಯ್ಯ, ತಾ. ಪಂ. ಕಾರ್ಯನಿರ್ವಾಧಿಕಾರಿ ಶ್ರೀನಿವಾಸ್,ಮುಖ್ಯಾಧಿಕಾರಿ ಮೂರ್ತಿ, ಶಿರಸ್ತೇದಾರ್ ಶ್ರೀನಿವಾಸ್, ಕಂದಾಯ ನಿರೀಕ್ಷಕ ಮಹದೇವಸ್ವಾಮಿ, ಗ್ರಾಮ ಲೆಕ್ಕಿಗ ಶೇಷಣ್ಣ, ಎಂಸಿಡಿಸಿಸಿ ವ್ಯವಸ್ಥಾಪಕ ಪ್ರವೀಣ್, ಅಧಿಕಾರಿಗಳು, ಜಿಪಂ ಮಾಜಿ ಉಪಾಧ್ಯಕ್ಷ ರಾಮಪುರ ಬಸವರಾಜು, ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು, ಮುಖಂಡರುಗಳಾದ ಅಜ್ಜೀಪುರ ನಾಗರಾಜು, ಮುರುಡೇಶ್ವರ ಸ್ವಾಮಿ, ಮಹಾದೇವ,ಕಣ್ಣೂರು ಮಹದೇವಸ್ವಾಮಿ,ಬಸಪ್ಪನದೊಡ್ಡಿ ಚಂದ್ರು ,ಪಾಂಡುರಂಗ ನಾಯ್ಡು, ರವೀಂದ್ರ, ರಮೇಶ್ ನಾಯ್ಡು,ನಗರಸಭೆ ಮಾಜಿ ಸದಸ್ಯ ಹರ್ಷ,ಮಂಗಲ ಪುಟ್ಟರಾಜು, ಕೊಪ್ಪಾಳಿ ಮಹದೇವನಾಯ್ಕ ಸೇರಿದಂತೆ ವಿವಿಧ ಗ್ರಾಮಗಳ ಕುರುಬ ಸಮುದಾಯದ ಯಜಮಾನರುಗಳು, ಮುಖಂಡರುಗಳು, ಸಾರ್ವಜನಿಕರು ಇದ್ದರು.




