Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ಬೇಗೂರು : ವಿದ್ಯುತ್‌ ತಂತಿ ಸ್ಪರ್ಶದಿಂದ ಹೆಣ್ಣಾನೆ ಸಾವು

ಬೇಗೂರು (ಗುಂಡ್ಲುಪೇಟೆ) : ವಿದ್ಯುತ್ ತಂತಿ ಸ್ಪರ್ಶಿಸಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸಮೀಪದ ಹೆಡಿಯಾಲ ವಲಯ ಚಿಕ್ಕಬರಗಿ ಗ್ರಾಮದ ಹುಲಿಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಬೇಗೂರು ಸಮೀಪದ ಹೆಡಿಯಾಲ ವಲಯದ ಚಿಕ್ಕಬರಗಿ ಶಾಖೆಯ ಹೆಬ್ಬಳ್ಳ ಗಸ್ತಿನ ದೂಡ್ಡಬರಗಿ ಗ್ರಾಮದ ಗೋಪಾಲ ಬಿನ್ ಬಿಎಸ್ ರಾಮಸಂಜಿವನಾಯ್ಡು ಎಂಬುವರ ಸರ್ವೇ ನಂ 36/6 ರ ಜಮೀನಿನಲ್ಲಿ ಸುಮಾರು 25 ರಿಂದ 30ವರ್ಷ ವಯಸ್ಸಿನ ಹೆಣ್ಣುಕಾಡಾನೆಯೊಂದು ವಿದ್ಯುತ್‌ ಸ್ಪರ್ಶದಿಂದ ಮೃತಪ್ಪಟ್ಟಿದೆ.
ವಿಷಯ ತಿಳಿದ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದ ನಂತರ ಡಾ. ವಾಸೀಂ ವೀರ್ಜಾ ಇಲಾಖಾ ಪಶುವೈಧ್ಯಾಧಿಕಾರಿಗಳು ಬಂಡೀಪುರ. ಇವರು ಮರಣೋತ್ತರ ಪರೀಕ್ಷೇ ನಡೆಸಿ ನಂತರ ಗುಂಡಿ ತೆಗೆದು ಊಳಲಾಯಿತು ಎರಡು ವರ್ಷಗಳ ಹಿಂದೆಯೂ ಕೂಡ ಸುಮಾರು 2018 ರಲ್ಲಿ ಇದೇ ವ್ಯಕ್ತಿಗಳು ಅಕ್ರಮ ವಿದ್ಯುತ್ ಹರಿಸಿ ಹೆಣ್ಣುಕಾಡಾನೆಯೊಂದು ಸಾವಿಗೀಡಾದ ಘಟನೆ ವಾಸುವ ಮುನ್ನವೆ ಮತ್ತೂಂದು ಘಟನೆ ನಡೆದಿದೆ.
ಡಾ.ರಮೇಶ್ ಕುಮಾರ್ ಪಿ. ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿದೇರ್ಶಕರು ಬಂಡೀಪುರ ವಲಯ ಅರಣ್ಯಾಧಿಕಾರಿಗಳು ಹೆಡಿಯಾಲ ಹಾಗೂ ಸಿಬ್ಬಂದಿಗಳು ಚೆಸ್ಕಾಂ ಇಲಾಖಾಧಿಕಾರಿಗಳೂ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!