Mysore
24
light rain
Light
Dark

ದಶಪಥದ ಬೆಂಗಳೂರು– ಮೈಸೂರು ಹೆದ್ದಾರಿಗೆ ಒಡೆಯರ್ ಹೆಸರಿಡಿ‌: ಎಸ್.ಎಂ. ಕೃಷ್ಣ ಪತ್ರ

ಬೆಂಗಳೂರು: ಹೊಸತಾಗಿ ನಿರ್ಮಾಣವಾಗಿರುವ ದಶಪಥಗಳ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿರುವ ಅವರು, ಒಡೆಯರ್ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ
ಒತ್ತಾಯಿಸಿದ್ದಾರೆ.

‘1902ರಿಂದ 1940ರವರೆಗೆ ಮೈಸೂರು ರಾಜ್ಯವನ್ನು ಆಳಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅನೇಕ ಶತಮಾನಗಳ ಪರಂಪರೆ ಮತ್ತು ಪದ್ಧತಿಗಳಲ್ಲಿ ಸಮೃದ್ಧವಾಗಿರುವ ಮೈಸೂರು ಸಂಸ್ಕೃತಿಯನ್ನು ರೂಪಿಸಿದ ಒಡೆಯರ್‌, ಕೃಷ್ಣ ರಾಜಸಾಗರ ಅಣೆಕಟ್ಟೆಯನ್ನು ನಿರ್ಮಿಸಿದ್ದು ಅವರ ಜೀವಮಾನದ ಮಹತ್ಸಾಧನೆಯಾಗಿದೆ. ಅವರು ದೂರದೃಷ್ಟಿಯ ಜನಪರ ರಾಜರಾಗಿದ್ದರು’ ಎಂದೂ ಪತ್ರದಲ್ಲಿ ಬಣ್ಣಿಸಿದ್ದಾರೆ.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ