Light
Dark

ಸಾಹಿತಿ ಭಗವಾನ್ ರನ್ನು ಕೋರ್ಟಿಗೆ ಹಾಜರುಪಡಿಸಿ : ಮೈಸೂರು ಎಸ್ ಪಿ ಗೆ ನೋಟಿಸ್

ಶಿವಮೊಗ್ಗ : ಹಿರಿಯ ಸಾಹಿತಿ ಭಗವಾನ್ ಅವರನ್ನು ದೂರಿನ ವಿಚಾರಣೆಗೆ ಸಂಬಂಧಪಟ್ಟಂತೆ ಕೋರ್ಟಿಗೆ ಹಾಜರುಪಡಿಸಬೇಕೆಂದು ಮೈಸೂರು ಎಸ್ಪಿಗೆ ಸಾಗರ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಭಗವಾನ್ ಅವರು ಬರೆದಿರುವ ರಾಮ ಮಂದಿರ ಏಕೆ ಬೇಡ ಎಂಬ ಕೃತಿಗೆ ಸಂಬಂಧಪಟ್ಟಂತೆ ಕೃತಿಯ ವಿರುದ್ಧವಾಗಿ ಸಾಗರ ತಾಲೂಕಿನ ಇಕ್ಕೇರಿಯ ಸಂಘ ಪರಿವಾರದ ಮಹಾಬಲೇಶ್ವರ್ ಎಂಬುವರು ನೀಡಿರುವ ದೂರಿನ ವಿಚಾರಣೆಗೆ ಸಂಬಂಧಪಟ್ಟಂತೆ ಭಗವಾನ್ ಅವರು ನ್ಯಾಯಾಲಯಕ್ಕೆ ಹಾಜರಾಗದ ಕುರಿತು ಪೊಲೀಸರ ವಿರುದ್ಧ ಸಾಗರದ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಗರದ ಜೆಎಂಎಫ್‌ಸಿ ನ್ಯಾಯಾಲಯ ಸಾಹಿತಿ ಭಗವಾನ್ ರನ್ನು ಕೋರ್ಟಿಗೆ ಹಾಜರುಪಡಿಸಬೇಕೆಂದು ಎಸ್ ಪಿ ಗೆ ನೋಟಿಸ್ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಸಾಗರ ಕೋರ್ಟ್ 30- 8 -2022 ರಂದು ಭಗವಾನ್ ರನ್ನು ಕೋರ್ಟಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿತ್ತು. ಆದರೆ ಸಾಗರದ ಟೌನ್ ಪೋಲೀಸರು ಸಾಹಿತಿ ಭಗವಾನ್ ಅವರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ನ್ಯಾಯಾಧೀಶರು ಮೈಸೂರಿನ ಎಸ್ ಪಿ ಗೆ 2-11-2022 ರಂದು ಭಗವಾನ್ ಅವರನ್ನು ಕೋಟಿಗೆ ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ