ಚಾಮರಾಜನಗರ: ಪವಿತ್ರ ಹಬ್ಬವಾದ ದಸರಾದಲ್ಲಿ ಹಿಂದೂಗಳು ಆಯುಧ ಪೂಜೆ ಮಾಡುವುದು ಸಂಪ್ರದಾಯ. ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರೂ ಸಂತ ಲೂರ್ದುಮಾತೆ ಚರ್ಚ್ನಲ್ಲಿ ಆಯುಧ ಪೂಜೆಯನ್ನು ಆಚರಿಸಿ ಗಮನ ಸೆಳೆದರು.
ಚರ್ಚ್ನ ಪಾದ್ರಿಗಳಾದ ಕ್ರಿಸ್ಟೋಫರ್ ಸಗಾಯರಾಜ್ ಮತ್ತು ಸೂಸೈ ರೆಜೀಸ್ ಅವರು ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಅಪಘಾತಗಳಿಂದ ಪಾರು ಮಾಡು ರಕ್ಷಕ ಏಸು ಎಂದು ಪ್ರಾರ್ಥಿಸಲಾಯಿತು.
ಈ ಹಿಂದೆ ತಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಆ ಸಂಪ್ರದಾಯ ಬಿಡಬಾರದೆಂದು ನಾವು ಆಯುಧ ಪೂಜೆ ಮಾಡಿದ್ದೇವೆ. ಎಲ್ಲಾ ಸಮುದಾಯದ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಾನ್ ಬ್ರಿಟೋ ತಿಳಿಸಿದರು.