ಹನೂರು : ತಾಲ್ಲೂಕಿನ ಕೆ ಗುಂಡಾಪುರ ಗ್ರಾಮದಲ್ಲಿ ಅಪ್ಪು ಅಭಿಮಾನಿ ಮುಜಾಮಿಲ್ ಪಾಷಾ ಪುನೀತ್ ರವರ ಮೊದಲ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಗ್ರಾಮಸ್ಥರಿಗೆ ಬಿರಿಯಾನಿ ಮಾಡಿಸಿ ಅನ್ನ ಸಂತಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಇದೇ ವೇಳೆ ಹನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಮುಜಾಮಿಲ್ ಪಾಷಾ ಮಾತನಾಡಿ ನಾನು ಅಪ್ಪು ಅವರ ಅಪ್ಪಟ ಅಭಿಮಾನಿ ಯಾಗಿದ್ದು, ಅಪ್ಪು ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ. ಅಪ್ಪುರವರು ಒಬ್ಬ ಜನಸೇವಕ ಜನರ ಕಷ್ಟ ಸುಖಗಳನ್ನು ಅರಿತು ಅದಕ್ಕೆ ಪೂರಕವಾಗಿ ಸಮಾಜದಲ್ಲಿ ತೊಡಗಿದ್ದರು. ಸಮಾಜಕ್ಕೆ ಅಂತಹ ಅನನ್ಯ ಸೇವೆ ನೀಡಿದ ವ್ಯಕ್ತಿಯನ್ನು ಸ್ಮರಣೆ ಮಾಡುವುದು ನಮ್ಮಂತ ಅಭಿಮಾನಿಗಳ ಜವಾಬ್ದಾರಿಯಾಗಿದೆ, ಇವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಕೆ ಗುಂಡಾಪುರ ನಿವಾಸಿಗಳು ಹಾಜರಿದ್ದರು.