Mysore
21
few clouds

Social Media

ಮಂಗಳವಾರ, 27 ಜನವರಿ 2026
Light
Dark

ಒನ್ ವೇ ನಿಯಮ ಸಡಿಲಿಕೆಗೆ ಮನವಿ

ಹುಣಸೂರು: ನಗರದ ಗೋಕುಲ ರಸ್ತೆಯನ್ನು ಒನ್ ವೇ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಆಗಿದ್ದ ತೊಂದರೆ ಆಲಿಸಿದ ಶಾಸಕ ಎಚ್.ಪಿ.ಮಂಜುನಾಥ್ ಅವರು ತಮ್ಮ ಕಚೇರಿಗೆ ಡಿ ವೈ ಎಸ್ ಪಿ ರವಿಪ್ರಸಾದ್ ಹಾಗೂ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರವರನ್ನು ಕರೆಸಿ ಬೆಳಿಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆ ನಿಯಮ ಸಡಿಲಗೊಳಿಸುವಂತೆ ಸಲಹೆ ನೀಡಿದರು.

ಗೋಕುಲ ರಸ್ತೆ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಶಾಸಕ ಮಂಜುನಾಥ್‌ರವರನ್ನು ಭೇಟಿ ಮಾಡಿ ಒನ್‌ವೇನಿಂದ ವ್ಯಾಪಾರಸ್ಥರಿಗೆ ಇದರಿಂದ ತೊಂದರೆಯಾಗುತ್ತಿದ್ದು, ನಿವಾಸಿಗಳು ಸಹ ಮನೆಗೆ ತೆರಳಲು ರಸ್ತೆಯಿಡಿ ಸುತ್ತಬೇಕಾಗಿದೆ. ಒನ್ ವೇ ಆದೇಶವನ್ನು ಸ್ವಲ್ಪ ಸಡಿಲಗೊಳಿಸಬೇಕು ಎಂದು ಕೋರಿದ್ದರು.

ಡಿವೈಎಸ್‌ಪಿ ಅವರು ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!