Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಆಂದೋಲನ ಪತ್ರಿಕೆ ವರದಿ ಪರಿಣಾಮ – ಗ್ರಾಮಕ್ಕೆ ವಿದ್ಯುತ್

ಆಂದೋಲನ ಟಿವಿ ವರದಿ ಪರಿಣಾಮ

ಹನೂರು: ಕಳೆದ ಐದು ತಿಂಗಳಿನಿಂದ ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುತ್ತಿದ್ದ ಜಡೇಗೌಡನ ದೊಡ್ಡಿ ಗ್ರಾಮಕ್ಕೆ ಆಂದೋಲನ ಪತ್ರಿಕೆ/ಟಿವಿಯಲ್ಲಿ ವರದಿ ಪ್ರಕಟಗೊಂಡ ಒಂದು ದಿನದಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡೆೇಗೌಡನ ದೊಡ್ಡಿ ಗ್ರಾಮದಲ್ಲಿ ಟಿಸಿಗೆ ಅಳವಡಿಸಿರುವ ಕೇಬಲ್ ದುರಸ್ತಿಗೊಂಡು ಐದು ತಿಂಗಳಲ್ಲೇ ಕಳೆದಿತ್ತು. ಕಳೆದ ಐದು ತಿಂಗಳಿನಿಂದ ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿದ್ದರು. ಕೇಬಲ್ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಸಹ ಪ್ರಯೋಜನವಾಗಿರಲಿಲ್ಲ.

ಅ.2 ರಂದು ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು ಈ ಬಗ್ಗೆ ಆಂದೋಲನ ಪತ್ರಿಕೆಯಲ್ಲಿ ‘ವಿದ್ಯುತ್ ಪೂರೈಸಲು ಒತ್ತಾಯಿಸಿ ಪ್ರತಿಭಟನೆ’ ಎಂಬ ಶೀರ್ಷಿಕೆಯಡಿ ಆಗಸ್ಟ್ 10 ರಂದು ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಸೆಸ್ಕಾಂ ಅಧಿಕಾರಿಗಳು 5 ತಿಂಗಳಿನಿಂದ ಬಗೆಹರಿಯದಿದ್ದ ಸಮಸ್ಯೆಯನ್ನು ಕೇವಲ ಒಂದು ದಿನದಲ್ಲಿ ದುರಸ್ತಿ ಪಡಿಸಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಕಲ್ಪಿಸಿದ್ದಾರೆ.

ಗ್ರಾಮದ ಮಲ್ಲಮ್ಮ ಮಾತನಾಡಿ ಗ್ರಾಮದಲ್ಲಿ ಕಳೆದ ಐದು ತಿಂಗಳಿನಿಂದ ವಿದ್ಯುತ್ ಸಮಸ್ಯೆ ಕಾಡುತ್ತಿತ್ತು ಆಂದೋಲನ ಪತ್ರಿಕೆ/ಟಿವಿಯಲ್ಲಿ ವರದಿ ಪ್ರಕಟ ನಂತರ ವಿದ್ಯುತ್ ಸಮಸ್ಯೆ ಬಗೆಹರಿದಿದೆ. ನಮ್ಮ ಸಮಸ್ಯೆ ಬಗೆಹರಿಸಿದ ಆಂದೋಲನ ಪತ್ರಿಕೆ/ಟಿವಿಗೆ ಧನ್ಯವಾದ ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಸಿದ್ದಕ್ಕಾಗಿ ಜಡೇಗೌಡನದೊಡ್ಡಿ ಗ್ರಾಮದ ರುದ್ರೇಗೌಡ ಹಾಗೂ ಕರಳೇ ಮಾದೇಗೌಡ ಧನ್ಯವಾದ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ