ಮೈಸೂರು: ಮೈಸೂರಿನಲ್ಲಿರುವ ಊಟಿರಸ್ತೆಯಲ್ಲಿನ ಮಸೀದಿ ಆಕಾರದ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಮಾಧ್ಯಮದವರೊಂದಗೆ ಮಾತನಾಡಿದ ವಿಕಾಸ್ ಶಾಸ್ತ್ರಿ “ನಾವು ಪಾಕಿಸ್ತಾನದಲ್ಲಿದ್ದೀವ ಅಥವಾ ಭಾರತದಲ್ಲಿರುವುದೇ ಎಂಬ ಅನುಮಾನ ಬರುತ್ತಿದೆ ಸಾರ್ವಜನಿಕ ವಲಯದಲ್ಲಿರುವ ಬಸ್ ನಿಲ್ದಾಣವನ್ನು ಹೇಗೆ ನೀವು ಮಸೀದಿಯ ರೀತಿ ಕಟ್ಟುತ್ತೀರಾ ಎಂದು ಪ್ರಶ್ನಿಸಿದರು.
ವಿವೇಕ ಕೊಠಡಿಯ ಬಗ್ಗೆ ಬಾಯಿ ಬಡಿದುಕೊಳ್ಳುವ ಬುದ್ದಿಜೀವಿಗಳೇ ಎಲ್ಲಿದ್ದೀರ? ಇದನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಎಲ್ಲಾ ಹಿಂದೂಪರ ಸಂಘಟನೆಗಳು ಸೇರಿ ಧ್ವಂಸ ಮಾಡಬೇಕಾಗುತ್ತದೆ .ಬಾಬರ್ ಮಸೀದಿಯನ್ನೆ ಉರುಳಿಸಿದ ನಮಗೆ ಈ ಬಸ್ ನಿಲ್ದಾಣ ದೊಡ್ಡದಲ್ಲಾ ಇಲ್ಲಿನ ಶಾಸಕರು ನಗರಪಾಲಿಕ ಅಧಿಕಾರಿಗಳು ಆ ಕಾಂಟ್ರಾಕ್ಟರ್ ಗೆ ಬುದ್ದಿ ಹೇಳಿ ತೆರವುಗೊಳಿಸಬೇಕು ಕಾಂಟ್ರಾಕ್ಟರ್ ಮುಸಲ್ಮಾನ ವ್ಯಕ್ತಿ ತಬ್ರೇಜ಼್ ಅವನ ಮನೆಯನ್ನು ಬೇಕಾದರೆ ಮಸೀದಿ ಮಾಡಿಕೊಳ್ಳಲಿ ಅಥವ ಅವನ ಸ್ವಂತ ಜಾಗದಲ್ಲಿ ಇದನ್ನೆಲ್ಲಾ ಮಾಡಲಿ ನಮಗೆ ಅದರ ತಕಾರಾರಿಲ್ಲ ಅದನ್ನು ಬಿಟ್ಟು ಈ ರೀತಿಯ ಧರ್ಮದ ನಡುವೆ ಬೆಂಕಿ ಹಚ್ಚುವ ಚಿಲ್ಲರೆ ಕೆಲಸ ಬೇಡ”ಎಂದು ಎಚ್ಚರಿಸಿದರು