ಗುಂಡ್ಲುಪೇಟೆ: ತಾಲ್ಲೂಕಿನ ಸೀಗೇವಾಡಿ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನ ಆಸ್ತಿ ಕಬಳಿಕೆ ಯತ್ನ ಪ್ರಕರಣ ಆರೋಪಿ ಮೇಲೆ ಕ್ರಮ ಕೈಗೊಂಡಿಲ್ಲವೆಂಬ ಆರೋಪದ ಮೇಲೆ ಬೇಗೂರು ಪೊಲೀಸರ ವಿರುದ್ದ ಠಾಣೆ ಮುಂದೆ ಹಿಂದೂ ಜಾಗರಣಾವೇದಿಕೆ ಪ್ರತಿಭಟನೆ ನಡೆಸಿದ್ದಾರೆ.
ದೇವಸ್ಥಾನದ ಪ್ರದೇಶವನ್ನು ಅತಿಕ್ರಮವಾಗಿ ವಶಪಡಿಸಿಕೊಳ್ಳಲು ಪಕ್ಕದ ಜಮೀನಿನ ಮಾಲೀಕರು ಮೈಸೂರು ಮೂಲದ ಸುಜಾತ ಎಂಬುವವರು ದೇವಸ್ಥಾನ ವಿರೂಪಗೊಳುಸಲು ಯತ್ನಿಸಿದ್ದು ಇವರ ವಿರುದ್ದ ಗ್ರಾಮಸ್ಥರು ಹಾಗೂ ಹಿಂದೂ ಜಾಗರಣಾವೇದಿಕೆ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಬೇಗೂರು ಪೊಲೀಸರು ದೂರು ನೀಡಿದ್ದ ಗ್ರಾಮಸ್ಥರ ವಿರುದ್ಧವೇ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಪಟ್ಟಹಿಡಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಹಿಂದೂಜಾಗರಣ ವೇದಿಕೆ ಸಿಡಿಮಿಡಿ:
ಬೇಗೂರು ಪೊಲೀಸ್ ಠಾಣೆ ಮುಂಭಾಗ ಹಿಂದೂಜಾಗರಣ ವೇದಿಕೆ ಪ್ರತಿಭಟನೆ ನಡೆಸಿ ಬೇಗೂರು ಹೋಬಳಿಯ ಶೀಗೇವಾಡಿ ಗ್ರಾಮದಲ್ಲಿ ಡಿಸೆಂಬರ್ ನಲ್ಲಿ ನಡೆದಿದ್ದ ಘಟನೆ ತಪ್ಪಿತಸ್ಥರ ವಿರುದ್ದ ಮೃದು ಧೋರಣೆ ತೋರುತ್ತಿರೋ ಪೊಲೀಸರು ಎನ್. ಸುಜಾತ ಮತ್ತು ಜೆಸಿಬಿ ಚಾಲಕನ ವಿರುದ್ಧ ದೂರು ದಾಖಸಿಕೊಳ್ಳಲು ಪೊಲೀಸರ ಹಿಂದೇಟು ದೇವಸ್ಥಾನದ ಅಸ್ತಿಯನ್ನ ಪೊಲೀಸ್ ಇಲಾಖೆಯೇ ಮಾರಲು ಪೋತ್ಸಾಹ ನೀಡ್ತಿದೆಯೇ ತಹಸೀಲ್ದಾರ್ ಅವರೇ ಅದು ಸರ್ಕಾರಿ ಜಾಗ ಎಂದು ವರದಿ ನೀಡಿದ್ದಾರೆ ಆದರೂ ತಪ್ಪಿತಸ್ಥರಿಗೆ ಪರೋಕ್ಷವಾಗಿ ಬೇಗೂರು ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂತ ಸಹ ಸಂಚಾಲಕ ಲೋಹಿತ್ ಆರಸ್ ಜಿಲ್ಲಾ ಸಂಚಾಲಕರಾದ ನಂದೀಶ್ ಕೆಬ್ಬೆಪುರ ಹಾಗೂ ನಂದೀಶ್ ಗುಂಡ್ಲುಪೇಟೆ, ಜಿಲ್ಲಾ ಸಹ ಸಂಚಾಲಕರು ರಂಗಸ್ವಾಮಿ ಚನ್ನಪ್ಪ ಹಾಗೂ ಶೀಗೇವಾಡಿ ಗ್ರಾಮಸ್ಥರು ಮತ್ತು ಬೇಗೂರಿನ ಕೆಲ ಗ್ರಾಮಸ್ಥರು ಉಪಸ್ಥಿತರಿದ್ದರು.