ಮೈಸೂರು : ನಗರದ ಅಶೋಕರಸ್ತೆಯಲ್ಲಿರುವ ಗುಜರಿ ಅಂಗಡಿುಂಲ್ಲಿ ಸುಮಾರು1 ಗಂಟೆ ಸಮಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿಯ ಆರ್ಭಟಕ್ಕೆ ಗುಜರಿ ಅಂಗಡಿ ಸುಟ್ಟು ಭಸ್ಮವಾಗಿದ್ದು, ಅಲ್ಲಿದ್ದ ಕೆಲವು ವಸ್ತುಗಳು ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದು ಕ್ಷಣಮಾತ್ರದಲ್ಲೇ ಬೆಂಕಿ ಕಾಣಿಸಿಕೊಂಡಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರಾಣವಾಗಿತ್ತು. ಬೆಂಕಿ ಅನಾಹುತದಿಂದ ಅಂದಾಜು ೧ ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದಿದ್ದಾರೆ. ಬೆಂಕಿ ಅವಘಡ ಸಂಭವಿಸಿದ ಕೂಡಲೇ ೪ ಅಗ್ನಿಶಾಮಕದಳದ ವಾಹನಗಳು ಹಾಗೂ 25 ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿಗಳಾದ ರಾಜು ಎಚ್, ಚಂದನ್ , ಸಿಬ್ಬಂದಿಗಳಾದ ಉಮೇಶ್ ಎಂ ಬಿ, ನಾಗಪ್ಪ ಅಂಬಡಗಟ್ಟಿ, ಸಂತೋಷ್ ಅಕ್ಕಿ, ಶಿವಪ್ಪ, ಪುನೀತ್, ಬಸಪ್ಪ, ನಂದನ್ ರಾಜ್, ಚಂದ್ರಶೇಖರ್, ನಾಗೇಶ್ ಭಾಗಿಯಾಗಿದ್ದರು





