Light
Dark

ವಿವಿಧ ಅಕಾಡೆಮಿಗಳ ಸದಸ್ಯರ ಬದಲಾವಣೆ

ಮೈಸೂರು: ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿ ಬರುವ ವಿವಿಧ ಅಕಾಡೆಮಿ ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕಾತಿ ಮಾಡಿದೆ. ಜತೆಗೆ ಹಳೆ ಸದಸ್ಯರನ್ನು ಕೈ ಬಿಟ್ಟು ಹೊಸಬರನ್ನು ನೇಮಿಸಿದೆ.

ಪರಿಷ್ಕೃತಿ ಪಟ್ಟಿಯಲ್ಲಿ ಮೈಸೂರು ಭಾಗದವರ ವಿವರ ಇಂತಿವೆ. ಕರ್ನಾಟಕ ಲಲಿತಾ ಅಕಾಡೆಮಿಗೆ ಅನೀತಾ ಫಾತೀಮಾ ಬದಲು ಮಡಿಕೇರಿ ರಾಮ ಗೌತಮ್, ಕರ್ನಾಟಕ ನಾಟಕ ಅಕಾಡೆಮಿಗೆ ಪ್ರೇಮ ಬಾದಾಮಿ ಬದಲು ಮೈಸೂರಿನ ಜೀವನ ಕುಮಾರ್, ಕರ್ನಾಟಕ ಜಾನಪದ ಅಕಾಡೆಮಿಗೆ  ಚಾಮರಾಜನಗರದ ನರಸಿಂಹ ಮೂರ್ತಿ ಬದಲು ಬಳ್ಳಾರಿ ಶಿವೇಶ್ವರ ಗೌಡ , ಕರ್ನಾಟಕ ಕೊಡವ ಸಮಾಜಕ್ಕೆ  ಕೌಸಲ್ಯ ಸತೀಶ ಸೋಮಯಂಡ, ನಾಗೇಶ್ ಕಾಲುರೂ, ಪ್ರಮೀಳಾ ನಾಚಯ್ಯ, ಚಾಮನರ ದಿನೇಶ್ ಬೆಳ್ಳಿಯಪ್ಪ, ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೈಸೂರಿನ ವಸಂತ ಭಾರದ್ವಾಜ್ ಕಬ್ಬಿನಾಲೆ ಅವರನ್ನು  ಕೈ ಬಿಟ್ಟು ಡಾ.ರಾಜೀವ ಲೋಚನ ಅವರನ್ನು ಸದಸ್ಯರಾಗಿ ನೇಮಿಸಿದೆ.

ರಂಗ ಸಮಾಜದ ಪೂರ್ತಿ ಬದಲು:

ರಂಗ ಸಮಾಜದ ಈ ಹಿಂದಿನಿ  ಸದಸ್ಯರಾದ ಸಿದ್ದರಾಮ ಹಿಪ್ಪರಗಿ, ಹಾಲಸ್ವಾಮಿ, ಮೈಸೂರಿನ ಡಾ.ಹೇಲನ್,  ಶ್ರೀಧರ್ ಹೆಗಡೆ, ಶಿವೇಶ್ವರ ಗೌಡ ಅವರನ್ನು ಕೈ ಬಿಟ್ಟು ಬದಲಾಗಿ ಡಾ. ಶಶಿಧರ್ ನರೇಂದ್ರ, ಡಾ.ಶೀನ ನಡೋಳಿ, ರಾಜಣ್ಣ ಜೀವರ್ಗಿ, ದಾಕ್ಷಾಯಿಣಿ ಭಟ್, ಡಾ.ಟಿ.ಆರ್.ಗುರುಪ್ರಸಾದ ಅವರನ್ನು ನೇಮಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ