ಸಿದ್ದಾಪುರ: ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದ ಅರಣ್ಯ ಇಲಾಖಾಧಿಕಾರಿಗಳನ್ನು ಕಾರ್ಮಿಕ ,ರೈತ ಮುಖಂಡರು ಸಭೆ ಬೈಸ್ಕರಿಸಿ ಧಿಕ್ಕಾರ ಕೂಗಿ ಹೊರ ನಡೆದ ಪ್ರಸಂಗ ನಡೆಯಿತು.
ನ 21ರಂದು ಕಾಡು ಪ್ರಾಣಿಗಳ ಅವಳಿ ತಡೆಗೆ ಅರಣ್ಯ ಇಲಾಖೆ ವಿರುದ್ಧ ನಡೆಯುವ ಬೃಹತ್ ಹೋರಾಟಕ್ಕೆ ಮುಂದಾಗಿರುವುದರಿಂದ ಮನಹೊಲೀಸುವ ಸಲುವಾಗಿ ದಿಡ್ಡಿರನೆ ಸಭೆನಡೆಸುವ ನಿರ್ಧಾರವನ್ನು ಅರಣ್ಯಾಧಿಕಾರಿಗಳು ಮುಂದ್ದಾಗಿದ್ದು ಹೊರಟ ಹತ್ತಿಕ್ಕಲು ಸಂಚು ನಡೆಯುತ್ತಿದೆ ಎಂದು ಕಾರ್ಮಿಕ ಮುಖಂಡ ಪಿ.ಆರ್ ಭರತ್ ಆರೋಪಿಸಿದರು.
ಶಾಲಾ ಮುಂಭಾಗದಲ್ಲಿ ಜಮಾಯಿಸಿದ ರೈತ ಸಂಘ ಹಾಗೂ ಕಾರ್ಮಿಕ ಸಂಘದ ಮುಖಂಡರುಗಳು. ನಿರಂತರ ಕಾಡುಪ್ರಾಣಿಗಳಿಂದ ಸಾವು ನೋವುಗಳು,ರೈತ ಫಸಲುಗಳು ನಾಶವಾಗುತ್ತಿದ್ದರು ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಈಗ ಅನುಕಂಪ ವ್ಯಕ್ತಪಡಿಸುತ್ತಿರುವುದರಿಂದೆ ಹೋರಾಟ ತಡೆಯುವ ಶಡ್ಯಾಂತರ ಇದಾಗಿದ್ದು ಯಾವುದೇ ಕಾರಣಕ್ಕೂ ಹೋರಾಟ ದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ಕಾಡುಪ್ರಾಣಿಗಳ ಹಾವಳಿಯಿಂದ ಗಾಯಗೊಂಡ. ಕೃಷಿ ಪಸಲು ನಷ್ಟವಾದವರಿಂದ ಮಾಹಿತಿ ಸಂಗ್ರಹಿಸಿದ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ಸಮಸ್ಯೆ ಬಗೆಹರಿಸಲು ಸ್ಥಳೀಯರ ಮಾಹಿತಿ ಸಂಗ್ರಹಿಸಿ ಸಭೆ ನಡೆಸಲಾಗಿದೆ ಎಂದ ಅಧಿಕಾರಿಗಳುಮಾಹಿತಿ ನೀಡಿದರು