Mysore
26
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ನ್ಯಾಯಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯ ಬಾಗಿಲಲ್ಲಿ ಪ್ರತಿಭಟನೆಗೆ ಸಜ್ಜಾದ ದಂಪತಿ

ನಂಜನಗೂಡು: ಮಗ ಅಪಘಾತದಲ್ಲಿ ಸಾವಿಗೀಡಾಗಿ ಎರಡೂವರೆ ವರ್ಷ ಕಳೆದರೂ ಇದಕ್ಕೆ ಕಾರಣನಾದ ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿದ ದಂಪತಿಗಳು ಈಗ ಪೊಲೀಸ್ ಠಾಣೆಯ ಬಾಗಿಲಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ತಮ್ಮ ಪುತ್ರ ಎನ್.ಎಂ.ಪ್ರವೀಣ್ ರಸ್ತೆ ಅಪಘಾತದಲ್ಲಿ 2020ರ ಮೇ 18ರಂದು ಮೃತಪಟ್ಟಿದ್ದು, ಇದಕ್ಕೆ ಕಾರಣರಾದವರನ್ನು ಇನ್ನೂ ಬಂಧಿಸಿ ನಮಗೆ ನ್ಯಾಯ ನೀಡಿಲ್ಲ ಎಂದು ಆರೋಪಿಸಿ ಫೆ.1ರಿಂದ ನಂಜನಗೂಡು ಪೊಲೀಸ್ ಠಾಣೆ ಮುಂಭಾಗದಲ್ಲಿ ಆಮರಣಾಂತ ಉಪವಾಸ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ನಂಜನಗೂಡು ಪುರಸಭೆಯ ಮಾಜಿ ಸದಸ್ಯರುಗಳಾದ ಮಹೇಶ ಹಾಗೂ ಸುಧಾ ಮಹೇಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರ ಪ್ರಕಾರ ಅಂದು ಪಾನಮತ್ತನಾಗಿದ್ದ ವ್ಯಕ್ತಿ ವೇಗವಾಗಿ ಕಾರು ಚಲಾಯಿಸಿಕೊಂಡು ಹಿಂಬದಿಯಿಂದ ನಮ್ಮ ಪುತ್ರನ ಬೈಕ್‌ಗೆ ಗುದ್ದಿ ಕಾರನ್ನು ಅಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ.
ಗಾಂಜಾ ಹಾಗೂ ಮದ್ಯದ ಬಾಟಲಿಗಳಿದ್ದ ಕಾರನ್ನು ಅಂದೇ ಪೊಲೀಸರು ವಶಪಡಿಸಿಕೊಂಡಿದ್ದು, ಆತನ ವಿಳಾಸ ನೀಡಿದ್ದರೂ ಈವರೆಗೂ ರಾಜಸ್ಥಾನ ಮೂಲದ ಆತನನ್ನು ಬಂಧಿಸದೇ ಇರಲು ಕಾರಣಗಳೇನು ಎಂದಿರುವ ಇವರು, ತಕ್ಷಣ ಆ ಆರೋಪಿಯನ್ನು ಬಂಧಿಸಿ ಮಗನ ಸಾವಿಗೆ ನ್ಯಾಯ ನೀಡಿ. ಇಲ್ಲವಾದಲ್ಲಿ ತಾವಿಬ್ಬರೂ ಪೊಲೀಸ್ ಠಾಣೆ ಮುಂಭಾಗ ಬುಧವಾರದಿಂದ ಆಮರಣಾಂತ ಉಪವಾಸ ಕೈಗೊಳ್ಳುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!