ಮೈಸೂರು: ಕುವೆಂಪುನಗರ ಠಾಣಾ ವ್ಯಾಪ್ತಿಯ ರಂಜಿತಾ(16) ಅವರು ಅ.6ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ.
ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿಯೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಈ ಸಂಬಂಧ ಇವರ ತಂದೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 5 ಅಡಿ ಎತ್ತರ, ದುಂಡುಮುಖ, ಸದೃಢ ಮೈಕಟ್ಟು, ಗೋಧಿಮೈ ಬಣ್ಣ, ಕಪ್ಪು ತಲೆಗೂದಲು ಹೊಂದಿದ್ದು, ಮನೆಯಿಂದ ಹೊರಟ ದಿನ ಬಿಸ್ಕೆಟ್ ಬಣ್ಣದ ಟಾಪ್ ಹಾಗೂ ಕೆಂಪು ಬಣ್ಣದ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾರೆ. ಇವರನ್ನು ಕಂಡಲ್ಲಿ ದೂ.ಸಂ.: 0821&2418324, 0821&2418340, ಮೊ.ಸಂ. 94808 02247 ಗೆ ಮಾಹಿತಿ ನೀಡಬಹುದು.