Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘದಿಂದ ೩೩ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ!

ಮೈಸೂರು : ಮೈಸೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ವತಿಯಿಂದ 2022-23 ನೇ ಸಾಲಿನಿ 33 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆ  ಉಪ ಆಯುಕ್ತರಾದ ಸೋಮಶೇಖರ್, ಸಿಂಧುಶ್ರೀ ಅವರು ಪ್ರತಿಭಾ ಪುರಸ್ಕಾರ ಮಾಡಿದರು.
 ಈ ವೇಳೆ ಸಿಂಧೂಶ್ರೀ ಮಾತನಾಡಿ, ಪೋಷಕರು ಶಿಕ್ಷಣದ ವಿಚಾರದಲ್ಲಿ ತರುವ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಆಗಬಹುದು.‌ಆದರೆ, ಅದರ ಫಲಿತಾಂಶ ಮುಂದಿನ ದಿನಗಳಲ್ಲಿ ಭವಿಷ್ಯ ಉಜ್ವಲ ಆಗಿಸಲಿದೆ. ಆಗ ಪೋಷಕರ ಪರಿಶ್ರಮ ಅರಿವಿಗೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ, ಅಧ್ಯಕ್ಷ ಜವರೇಗೌಡ  ಉಪಾಧ್ಯಕ್ಷ ಸಿ.ರವಿಶಂಕರ್, ಖಜಾಂಚಿ ಎನ್.ಪುಟ್ಟಸ್ವಾಮಿ, ಸಂಘದ ನಿರ್ದೇಶಕರಾದ ಎಂ.ಬಸವಣ್ಣ, ಬಿ. ಭಾಸ್ಕರ್,  ಡಿ.ಸುರೇಂದ್ರ ಕುಮಾರ್,ಎಸ್. ಮಂಜುಕುಮಾರ್ , ಶಂಭು, ಪಿ.ಶೀಲಾ, ಎಸ್. ಮೈತ್ರಿ, ಮಹಾದೇವಸ್ವಾಮಿ,  ಬಿ. ರಾಜು, ಆರ್ಮುಗಂ ಕಾರ್ಯದರ್ಶಿ ಎನ್. ಶಿವಕುಮಾರ್ ಕಚೇರಿಯ ಸಿಬ್ಬಂದಿಗಳಾದ ಸಿದ್ದಪ್ಪಾಜಿ . ಮೋಹನ್ ಕುಮಾರ್ . ಸುರೇಶ್ ಉಪಸ್ಥಿತರಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ