ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಸೇತುವೆ ಬಳಿ ತಡರಾತ್ರಿ ನಡೆದಿದೆ.
ಕೆಆರ್ ಪೇಟೆಯಿಂದ ಅಕ್ಕಿಹೆಬ್ಬಾಳುವಿಗೆ ತೆರಳುವಾಗ ಈ ಘಟನೆ ನಡೆದಿದ್ದು, ಕೆ.ಆರ್. ಪೇಟೆ ನಿವಾಸಿಗಳಾದ ಅನಿಕೇತನ್ ( 30 ), ಪವನ್ ಶೆಟ್ಟಿ ( 32 ) ಹಾಗೂ ಚಿರಂಜೀವಿ ( 32 ) ಮೃತಪಟ್ಟಿದ್ದಾರೆ. ಇನ್ನು ಸಾಗರ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.