ಮೈಸೂರು : ಪ್ರಕರಣವೊಂದರ ಆರೋಪಿಯಾದ ರಿಷೀಶ್ವರಲಾಲ್ ರಿಷಿ ಬಿನ್ ಲೇಟ್ ಬಸಂತ್‌ಲಾಲ್, ೪೬ ವರ್ಷ ಎಂಬಾತ ತಲೆಮರೆಸಿಕೊಂಡಿದ್ದು, ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ ೧ ಲಕ್ಷ ರೂ.ಬಹುಮಾನ ಘೋಷಿಸಲಾಗಿದೆ.
ಈತನ ವಿರುದ್ಧ ಅಂಡಮಾನ್ ನಿಕೋಬಾರ್ ದ್ವೀಪದ ವ್ಯಾಪ್ತಿಗೆ ಬರುವ ಅಬರ್ಡಿನ ಪೊಲೀಸ್ ಠಾಣೆ ಪೋರ್ಟ್ ಬ್ಲೇರ್ ಅ.೧ರಂದು ಐಪಿಸಿ ಕಲಂ, ೩೭೬ (ಡಿ), ೨೨೮(ಎ), ೫೦೬, ೧೨೦(ಬಿ) ಅಡಿ ಪ್ರಕರಣ ದಾಖಲಾಗಿದೆ. ಈತ ತಲೆ ಮರೆಸಿಕೊಂಡಿದ್ದು, ಮಾಹಿತಿ ನೀಡಿದವರಿಗೆ ೧ ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಆರೋಪಿಯ ಚಹರೆ : ೫.೭ ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೂದಲಿನ ಬಣ್ಣ ಕಪ್ಪು, ಬಿಳಿ ಮೈಬಣ್ಣ ಹಾಗೂ ಕಪ್ಪು ಬಣ್ಣದ ಕಣ್ಣುಗಳು. ಮಾಹಿತಿಗೆ ಮೊಬೈಲ್ ಸಂಖ್ಯೆ ೯೪೭೪೨೪೬೮೬೯, ೯೧ ೯೫೩೧೮೯೨೦೫೭, ೯೪೭೪೨೨೨೧೧೩ ಸಂಪರ್ಕಿಸಿ.