Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಮೈಸೂರು: ಗೋಕುಲಂ ಪಾರ್ಕ್‌ನಲ್ಲಿ ಗಂಧದ ಮರ ಕಳವು

ಮೈಸೂರು: ಪಾರ್ಕ್‌ ಒಂದರಲ್ಲಿ ಬೆಳೆದಿದ್ದ ಗಂಧದ ಮರವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಡಿದು ಕದ್ದೊಯ್ದಿರುವ ಘಟನೆ ನಗರದ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.

ಇಲ್ಲಿನ ಬಿ.ಸಿ ಲಿಂಗಯ್ಯ ಪಾರ್ಕ್‌ನಲ್ಲಿ ಬೆಳೆದಿದ್ದ ಗಂಧದ ಮರವನ್ನು ರಾತ್ರೋರಾತ್ರಿ ಕಳ್ಳರು ಕಡಿದಿದ್ದಾರೆ. ಇಂದು (ಭಾನುವಾರ, ಮೇ.26) ಬೆಳಗಿನ ಜಾವ ಪಾರ್ಕ್‌ನಲ್ಲಿ ವಾಕಿಂಗ್‌ ಗೆ ಬಂದ ಸ್ಥಳೀಯರು ಇದನ್ನು ಗಮನಿಸಿ ತಕ್ಷಣ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ವಿವಿ ಪುರಂ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಭೇಟೆಗೆ ಜಾಲ ಹೆಣೆದಿದ್ದಾರೆ.

ಆದರೆ ಈವರೆಗೆ ಯಾವುದೇ ಅರಣ್ಯಾಧಿಕಾರಿಗಳು ಬರದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Tags: