Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ರೇವ್‌ ಪಾರ್ಟಿಯಲ್ಲಿ ಹಾವಿನ ವಿಷ ಪೂರೈಕೆಗೆ ವರ್ಚುವಲ್‌ ಸಂಖ್ಯೆ ಬಳಸುತ್ತಿದ್ದ ಬಿಗ್‌ಬಾಸ್‌ ವಿನ್ನರ್!

ನವದೆಹಲಿ: ರೇವ್‌ ಪಾರ್ಟಿಯಲ್ಲಿ ಹಾವಿನ ವಿಷ ಪೂರೈಸಲು ಮತ್ತು ಹಾವಾಡಿಗರಿಗೆ ಸೂಚನೆಗಳನ್ನು ಕೊಡಲು ಸೀಸನ್‌ 2 ಹಿಂದಿ ಬಿಗ್‌ಬಾಗ್‌ ವಿನ್ನರ್‌ ಹಾಗೂ ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ ವರ್ಚುವಲ್‌ ಫೋನ್‌ ಸಂಖ್ಯೆಯನ್ನು ಬಳಸಿದ್ದಾರೆ ಎಂದು ನೋಯ್ಡಾ ಪೊಲೀಸರು ಶನಿವಾರ ಉತ್ತರ ಪ್ರದೇಶದ ನ್ಯಾಯಾಲಯಕ್ಕೆ ಸಲ್ಲಿಸಿದ 1200 ಪುಟಗಳ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಎಂಟು ಆರೋಪಿಗಳನ್ನು ಹೆಸರಿಸಿ 24 ಸಾಕ್ಷಿಗಳನ್ನು ಹೇಳಿಕೆಗಳನ್ನು ಒಳಗೊಂಡಿರುವ ಚಾರ್ಜಾಶೀಟ್‌ನಲ್ಲಿ ಯೂಟ್ಯೂಬರ್‌ ಪಾರ್ಟಿಗಳಿಗೆ ಹೇಗೆ ವಿಷವನ್ನು ಪೂರೈಸುತ್ತಿದ್ದರು ಎಂಬ ಆಘಾತಕಾರಿ ವಿವರಗಳು ಇವೆ. ಈ ಎಲ್ಲಾ ಕೃತ್ಯಗಳಿಗೆ ಆರೋಪಿಗಳು ವರ್ಚುವಲ್‌ ಸಂಖ್ಯೆ ಬಳಸಿದ್ದಾರೆ. ಇದರಿಂದ ಗೌಪ್ಯತೆ ಮತ್ತು ಲೋಕೇಶನ್‌ ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ ಎಂದು ನೋಯ್ಡಾ ಪೊಲೀಸರು ಹೇಳೀದ್ದಾರೆ.

ಈಶ್ವರ್‌ ಒಡೆತನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಾವುಗಳಿಂದ ವಿಷವನ್ನು ಹೊರತೆಗೆಯಲಾಗುತ್ತಿತ್ತು. ಸದ್ಯ ಯೂಟ್ಯೂಬರ್‌ ವಿರುದ್ಧ ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟ್ರೋಪಿಕ್‌ ಸಬ್‌ಸ್ಟನ್ಸ್‌ ಆಕ್ಟ್‌ 1985ರ ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಐದು ಹಾವಾಡಿಗರು, ಒಂಭತ್ತು ಹಾವುಗಳೊಂದಿಗೆ ಬಂಧಿಸಲಾಗಿತ್ತು. ಬಂಧಿತ ಹಾವಾಡಿಗರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಎಲ್ವಿಶ್‌ ಯಾದವ್‌ ಮತ್ತು ಇತರ ಆರೋಪಿಗಳನ್ನು ಬಂಧಿಸಿದ್ದರು.

Tags: