ಮೈಸೂರು: ಕರ್ತವ್ಯ ಲೋಪ ಮಾಡಿದ ಹಿನ್ನೆಯಲ್ಲಿ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆ ಸಲೀಂ ಎಂಬುವವರು ಅಮಾನತಾಗಿದ್ದಾರೆ.
ಸಂಚಾರ ಮತ್ತು ಅಪರಾಧ ಡಿಜಿಪಿ ಜಾಹ್ನವಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಳ್ಳತನ ಹಾಗೂ ಸರಗಳ್ಳರೊಂದಿಗೆ ಶಾಮೀಲಾಗಿರುವ ಆರೋಪ ಹಾಗೂ ಇತರ ವಿಚಾರಗಳಲ್ಲಿ ಅಪರಾಧಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪ್ರಾಥಾಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಭೀತಾದ ಹಿನ್ನೆಯಲ್ಲಿ ಜು.12 ರಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.