Mysore
22
overcast clouds
Light
Dark

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ನೀಡಿದ ಹೈಗ್ರೌಂಡ್‌ ಠಾಣಾ ಪೊಲೀಸರು

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಅವರನ್ನೇ ಹೋಲುವ ಹಾಗಿರುವ ವೀಡಿಯೋ ಒಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಬಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯಾ ಅವರಿಗೆ ಬೆಂಗಳೂರಿನ ಹೈಗ್ರೌಂಡ್‌ ಠಾಣಾ ಪೊಲೀಸರು ಸಮನ್ಸ್‌ ನೀಡಿದ್ದಾರೆ.

ಕೆಪಿಸಿಸಿ ಕಾನೂನು ಘಟಕದ ರಮೇಶ್‌ ಬಾಬು ಎಂಬುವವರು ಏ.25 ಜೆಪಿ ನಡ್ಡಾ ಅವರ ಸೂಚನೆಯಂತೆ ರಾಜ್ಯ ಬಿಜೆಪಿ ಎಕ್ಸ್‌ ಖಾತೆಯಲ್ಲಿ ಅಮಿತ್‌ ಮಾಳವೀಯಾ ಅವರು ಸಮುದಾಯದ ಮಿಸಲಾತಿಗೆ ಸಂಬಂಧಿಸಿದ ವೀಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರನ್ನು ಬಳಸಲಾಗಿದೆ ಎಂದು ದೂರಿನಲ್ಲಿ ಹೇಳಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಹೈಗ್ರೌಂಡ್‌ ಪೊಲೀಸರು ಬಿಜೆಪಿ ಈ ಮೂವರಿಗೆ ಸಮನ್ಸ್‌ ನೀಡಿದ್ದಾರೆ.