Mysore
26
overcast clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಹಾಸನ: ಗೆಳೆಯನನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

ಹಾಸನ: ಕಾರಿನೊಳಗೆ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಹಾಸನದ ಕೆ.ಆರ್.ಪುರಂನಲ್ಲಿ ನಡೆದಿದೆ.

ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದ ಇಬ್ಬರು ಯುವಕರ ನಡುವೆ ಜಗಳ ಆರಂಭವಾಗಿ, ಒಬ್ಬ ಹಾರಿಸಿದ ಗುಂಡಿಗೆ ಇನ್ನೊಬ್ಬ ಕಾರಿನಿಂದ ಹೊರಗೆ ಹಾರಿ ಬಿದ್ದಿದ್ದಾನೆ. ನಂತರದಲ್ಲಿ ಕಾರಿನಲ್ಲಿದ್ದ ಮತ್ತೊಬ್ಬ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಂದೂಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಹಾಸನ ಎಸ್‌ಪಿ ಸುಜೀತಾ ಮಾಹಿತಿ ನೀಡಿದ್ದು, ಇಬ್ಬರು ಕಾರಿನೊಳಗೆ ಮಾತನಾಡುತ್ತಾ ಒಬ್ಬರಿಗೊಬ್ಬರು ಶೂಟ್ ಮಾಡಿಕೊಂಡಿದ್ದಾರೆ. ಘಟನೆ ನಡೆಯಲು ವ್ಯವಹಾರಿಕ ಸಂಬಂಧ ಇತ್ತು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ತನಿಖೆ ಬಳಿಕವೇ ಎಲ್ಲಾ ಸತ್ಯಾಂಶ ಹೊರಬರುತ್ತೆ ಎಂದು ಮಾಹಿತಿ ನೀಡಿದ್ದಾರೆ.

Tags: