ಮೈಸೂರು : ಭಾರತದ ಜನಪ್ರಿಯ ಹಾಗೂ ಅತಿದೊಡ್ಡ ಟೆಲಿಕಾಂ ಆಪರೇಟರ್ ಗಳಲ್ಲಿ ಒಂದಾಗಿರುವ ಏರ್‌ಟೆಲ್ ಸಂಸ್ಥೆ, ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಗೂ 5G ಸೇವೆಯನ್ನು ವಿಸ್ತರಿಸುತ್ತಿದೆ. ಈಗಾಗಲೇ ಏರ್‌ಟೆಲ್ 5G ಸೇವೆಯ ಅಳವಡಿಕೆ ಬಹಳ ತ್ವರಿತವಾಗಿ ಆಗುತ್ತಿದೆ.
ಈವರೆಗೆ ದೇಶದಾದ್ಯಂತ 24.4 ಕೋಟಿ ಏರ್‌ಟೆಲ್ ಬಳಕೆದಾರರು ಇದ್ದಾರೆ. ಇವರಲ್ಲಿ 5G ಸೇವೆ ಬಳಕೆ ಮಾಡುತ್ತಿರುವವರ ಸಂಖ್ಯೆ 5 ಕೋಟಿಗೂ ಹೆಚ್ಚಿದೆ. ಕೇವಲ ಕರ್ನಾಟಕದಲ್ಲಿಯೇ 51 ಲಕ್ಷ ಗ್ರಾಹಕರು 5G ಸೇವೆಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಏರ್‌ಟೆಲ್ ಸಂಸ್ಥೆ, ಕರ್ನಾಟಕದ 31 ಜಿಲ್ಲೆಗಳಿಗೂ ಕೂಡ 5G ನೆಟ್‌ವರ್ಕ್ ಅಳವಡಿಸುವುದಾಗಿ ತಿಳಿಸಿದೆ.
ಕರ್ನಾಟಕದಲ್ಲಿ ಮೊದಲ ಹೈ ಸ್ಪೀಡ್ 5G ಇಂಟರ್ನೆಟ್ ಅಳವಡಿಸಿರುವ ಹೆಗ್ಗಳಿಕೆ ಏರ್‌ಟೆಲ್ ಸಂಸ್ಥೆಗೆ ಸಲ್ಲುತ್ತದೆ ಎಂದು ಏರ್‌ಟೆಲ್ ಕಂಪನಿಯ ಕರ್ನಾಟಕದ ಮುಖ್ಯಸ್ಥ ವಿವೇಕ್ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಏರ್‌ಟೆಲ್ 5G ಇಂಟರ್ನೆಟ್ ಸೇವೆಯನ್ನು ಶುರು ಮಾಡಿತ್ತು. ಒಂದೇ ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 5G ಸೇವೆಯನ್ನು ಏರ್‌ಟೆಲ್ ವಿಸ್ತರಿಸುತ್ತಿದೆ.
ಈ ಕುರಿತು ಏರ್‌ಟೆಲ್ ಟೆಲಿಕಾಂ ಸಂಸ್ಥೆ ನೆನ್ನೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಹಂಪಿಯಂತಹ ಪ್ರವಾಸಿ ಸ್ಥಳಗಳು,ಮತ್ತು ರಾಜ್ಯದ ತುತ್ತ ತುದಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟದಲ್ಲೂ ಏರ್‌ಟೆಲ್ 5G ಸೇವೆ ಸಿಗಲಿದೆ ಎಂದು ಹೇಳಿಕೊಂಡಿದೆ.
ಜಿಯೋ ಪ್ರಭಲ ಪೈಪೋಟಿ : ಏರ್‌ಟೆಲ್ ಗೆ ಸರಿಸಾಟಿಯಾಗಿ ರಿಲಯನ್ಸ್ ಜಿಯೋ ಬೆಳೆದು ನಿಂತಿದ್ದು, ಏರ್‌ಟೆಲ್ ಸಂಸ್ಥೆಗೆ ಪ್ರಭಲ ಪೈಪೋಟಿ ನೀಡುತ್ತಿದೆ. ಏರ್‌ಟೆಲ್ ನಂತೆಯೇ ಜಿಯೋ ಕೂಡ 5G ನೆಟ್ವರ್ಕ್ ಸೇವೆಯನ್ನು ಸಮರ್ಪಕವಾಗಿ ಪೂರೈಸುತ್ತಿದೆ. ಖಾಸಗಿ ಸಂಸ್ಥೆಯೊಂದು ನಡೆಸಿದ ಸರ್ವೆಯಲ್ಲಿ ಜಿಯೋ ನೆಟ್ವರ್ಕ್ ದೇಶದ ಅತಿವೇಗದ 5G ನೆಟ್ವರ್ಕ್ ಎಂಬುದು ತಿಳಿದುಬಂದಿದೆ.