ಕೊಲ್ಕತ್ತಾ : ರಿಲಯನ್ಸ್ ಕಂಪನಿ ಪಶ್ಚಿಮ ಬಂಗಾಳದಲ್ಲಿ 20.000 ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ 7ನೇ ಬೆಂಗಾಲ್ ಗ್ಲೋಬಲ್ ಉದ್ಯಮ ಸಮಾವೇಶದಲ್ಲಿ ಮಾತನಾಡಿದ ಮುಕೇಶ್ ಅಂಬಾನಿಯವರು, ರಿಲಯನ್ಸ್ ಇದುವರೆಗೂ ಪಶ್ಚಿಮ ಬಂಗಾಳದಲ್ಲಿ 45,000 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿದೆ.
ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂ. ಬಂಡವಾಳವನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನಾವು ಜಿಯೋ ಮೂಲಕ ದೇಶದ ಮೂಲೆ ಮೂಲೆಗಳಿಗೆ 5G ತಂತ್ರಜ್ಞಾನವನ್ನು ಒದಗಿಸುತ್ತಿದ್ದೇವೆ. ಈಗ ಹೂಡಿಕೆ ಮಾಡಲು ಸಿದ್ಧವಾಗಿರುವ 20 ಸಾವಿರ ಕೋಟಿ ರೂ ಹಣವನ್ನು ಟೆಲಿಕಾಂ, ಜೈವಿಕ ಇಂಧನ ಮತ್ತು ರಿಟೇಲ್ ಗೆ ವ್ಯಯಿಸಲಾಗುವುದು ಎಂದು ತಿಳಿಸಿದ್ದಾರೆ.
ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ : ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈಗಾಗಲೇ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇಂಟರ್ನೆಟ್ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಇದೀಗ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಸುಮಾರು 70,000 ಕೋಟಿ ರೂ.ಆದಾಯದ ಅವಕಾಶವನ್ನು ಬೆನ್ನಟ್ಟುತ್ತಿದ್ದಾರೆ. ಇನ್ನು ಅದಕ್ಕೆ ಹತ್ತಿರವಾಗುವ ಸಲುವಾಗಿ ಭಾರತದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದ್ದಾರೆ.ಕೇವಲ 15.000 ಸಾವಿರ ರೂ. ಗೆ ರಿಲಯನ್ಸ್ ಕಂಪನಿಯ ಜಿಯೋ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಜಿಯೋ ಕಂಪನಿ ತನ್ನ ಹೊಸ ಲ್ಯಾಪ್‌ಟಾಪ್ ಬಿಡುಗಡೆಯ ಕುರಿತಂತೆ ಈವರೆಗೆ ಅಧಿಕೃತವಾಗಿ ಯಾವುದೇ ವಿವರಗಳನ್ನು ನೀಡಿಲ್ಲ. ಸಧ್ಯ ಜಿಯೋ ಬುಕ್ ಬಿಡುಗಡೆ ಜೊತೆಗೆ ಈ ವಿಭಾಗವೂ ಕೂಡ ತೆಗೆದುಕೊಳ್ಳುವ ಉದ್ದೇಶ ಸ್ಪಷ್ಟವಾಗಿದೆ. ರಿಲಯನ್ಸ್ ಜಿಯೋ ಕಂಪನಿಯು ಲ್ಯಾಪ್‌ಟಾಪ್ ಖರೀದಿಯ ಜೊತೆಗೆ ಗ್ರಾಹಕರಿಗೆ 100 GB ಉಚಿತ ಕ್ಲೌಡ್ ಸ್ಟೋರೆಜ್ ನೀಡಲಿದೆ.