Mysore
25
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಸ್ಕೇಟಿಂಗ್‌ ರಾಣಿ ಮುಕ್ತಾಟಿರ ಕಲ್ಪನಾ ಕುಟ್ಟಪ್ಪ

• ಅನಿಲ್ ಅಂತರಸಂತೆ

ಗಮನ ಗುರಿಯತ್ತ ಇದ್ದರೆ ಸಾಧನೆಯ ಹಾದಿ ಸುಲಭ ವಾಗಲಿದೆ ಎಂಬ ಮಾತಿಗೆ ತಕ್ಕಂತೆ ತಮ್ಮ ಸಣ್ಣ ವಯಸ್ಸಿನಿಂದಲೇ ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಸ್ಟೇಟಿಂಗ್‌ಕ್ರೀಡೆಯಲ್ಲಿ ಸಾಧನೆ ಮಾಡಲು ಹೊರಟವರು ಮುಕ್ಕಾಟರ ಕಲ್ಪನಾ ಕುಟ್ಟಪ್ಪ ಇಂದು ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಕಲ್ಪನಾ ಕುಟ್ಟಪ್ಪ ತಮ್ಮ 4ನೇ ವಯಸ್ಸಿಗೆ ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಅಂಗಳಕ್ಕೆ ಇಳಿದರು. ತಮಗೆ ಉಡುಗೊರೆಯಾಗಿ ಬಂದ ಸ್ಟೇಟಿಂಗ್ ಮುಂದೆ ತಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಡಲಿದೆ ಎಂಬುದನ್ನೂ ಊಹಿಸಿರದ ಅವರು ಸ್ಟೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ತೋರಿ ಶ್ರದ್ಧೆ ಮತ್ತು ಪರಿಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪದಕ ಗಳಿಸಿಕೊಂಡಿದ್ದಾರೆ. ಕಲ್ಪನಾ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ರೀಗಲ್ ರೋಲರ್ ಸ್ಟೇಟಿಂಗ್ ಕ್ಲಬ್‌ನಲ್ಲಿ ಸ್ಟೇಟಿಂಗ್ ಕಲಿಯಲು ಆರಂಭಿಸಿದರು. ಸಂಸ್ಥೆಯಲ್ಲಿ ಸೂಕ್ತ ತರಬೇತಿ ಪಡೆದ ಅವರು ತಮ್ಮ 6ನೇ ವಯಸ್ಸಿನಲ್ಲಿಯೇ ಕ್ಲಬ್ ಹಂತದ ಸ್ಪರ್ಧೆಗಳು ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಲು ಆರಂಭಿಸಿದರು. ಬಳಿಕ ಅವರ ಉತ್ಸಾಹ ಮತ್ತಷ್ಟು ಹೆಚ್ಚಾಗಿ ಸಾಧನೆ ಮಾಡುವ ಹಂಬಲ ಬೆಳೆಸಿಕೊಂಡರು.

ಕಲ್ಪನಾ ದೇಶದಾದ್ಯಂತ ಸಾಕಷ್ಟು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಟೇಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಸುಮಾರು 50ಕ್ಕೂ ಅಧಿಕ ಪದಕಗಳನ್ನೂ ಗೆದ್ದ ಸಾಧನೆ ಮಾಡಿದ್ದಾರೆ.

ಕಲ್ಪನಾರವರ ಬಹುದೊಡ್ಡ ಕನಸು ತಾವು ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಬೇಕು ಎಂಬುದಾಗಿತ್ತು. ಅದರಂತೆ ಅವರು ಭಾರತದ ಸ್ಟೇಟಿಂಗ್ ತಂಡಕ್ಕೆ ಆಯ್ಕೆಯಾಗಿ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವೇಗದ ಸ್ಟೇಟಿಂಗ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದರು. ನಂತರ 2023ರ ಅಕ್ಟೋಬರ್ 18-28ರ ವರೆಗೆ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ ಶಿಪ್ (ಜೂನಿಯರ್)ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಕಲ್ಪನಾರವರಿಗೆ ಅವರು ಕುಟುಂಬಸ್ಥರ ಪ್ರೋತ್ಸಾಹ ಹೆಚ್ಚಾಗಿ ಸಿಕ್ಕಿತು. ಆರಂಭದಲ್ಲಿ ಸ್ಕೇಟಿಂಗ್ ತರಗತಿಗಳನ್ನು ಸೇರಿ ನಿರಂತರ ಅಭ್ಯಾಸವನ್ನು ಮಾಡುತ್ತಾ ನಂತರದಲ್ಲಿ ರಾಜ್ಯ, ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅವರು, ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪ್ರಸ್ತುತ ಮೈಸೂರಿನ ಖಾಸಗಿ ಕಾಲೇಜುವೊಂದರಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅವರು, ಬೆಂಗಳೂರಿನ ಪ್ರತೀಕ್ ರಾಜ್ ಎಂಬವರ ಮಾರ್ಗದರ್ಶನದಲ್ಲಿ ಸ್ಟೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ವಾಸಿಸುತ್ತಿರುವ ಇವರು ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಅಂತಾರಾಷ್ಟ್ರೀಯ ಸ್ಟೇಟಿಂಗ್ ಕ್ರೀಡಾಪಟು ಮತ್ತು ಏಕಲವ್ಯ ಪ್ರಶಸ್ತಿ ವಿಜೇತ ಪ್ರತೀಕ್ ರಾಜ್‌ರವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಉಳಿದಂತೆ ಬಿಡುವಿನ ಸಮಯದಲ್ಲಿ ಮೈಸೂರಿನಲ್ಲಿ ಸ್ಟೇಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ.
ania64936@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!