ಚೀನಾ ಸೇನೆ ಭಾರತದ ಸುಮಾರು ೨ ಸಾವಿರ ಚದರ ಕಿಲೋ ಮೀಟರ್ ಭೂಮಿಯನ್ನು ಕಬಳಿಸಿದೆ ಎಂದಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿರುವುದು ಸರಿಯಾಗಿದೆ. ಉನ್ನತ ಸ್ಥಾನದಲ್ಲಿರುವವರು ಯಾವುದೇ ಸಾಕ್ಷಿ ಆಧಾರಗಳಿಲ್ಲದೇ ಸಾಮಾನ್ಯ ಪ್ರಜೆಯಂತೆ ಮಾತನಾಡಿ ದೇಶದ ಘನತೆ ಕುಗ್ಗಿಸುವುದು ತರವಲ್ಲ.
ವಿರೋಧಪಕ್ಷದ ನಾಯಕ ಸ್ಥಾನದಲ್ಲಿರುವವರಿಗೆ ಆ ಸ್ಥಾನದ ಘನತೆ, ಗೌರವ, ಮಹತ್ವದ ಅರಿವಿರಬೇಕು. ಇಂತಹ ಸೂಕ್ಷ್ಮ ವಿಚಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಶ್ನಿಸುವ ಬದಲು ಸಂಸತ್ತಿನಲ್ಲಿ ಪ್ರಶ್ನಿಸಿ ಎಂದಿರುವ ನ್ಯಾಯಾಲಯ ಜನ ಪ್ರತಿನಿಧಿಗಳು ದೇಶದ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಸಂದೇಶ ಸಾರಿದೆ.
– ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು





